ಗದಗ: ಭ್ರಷ್ಟಾಚಾರ ನಡೆದಿದ್ದರೆ ಜನ ನಮ್ಮನ್ನು ಓಡಾಡೋದಕ್ಕೆ ಬಿಡುತ್ತಿರಲಿಲ್ಲ. ಮಾಜಿ ಮುಖ್ಯಮಂತ್ರಿಗಳಾಗಿ ನಿಮ್ಮ ಇತಿಮಿತಿಯಲ್ಲಿ ಏನೇನಿದೆ ಅಂತಾ ಚರ್ಚೆ ಮಾಡಬೇಕು. 40/50 ಪರ್ಸೆಂಟ್ ಅಂತಾ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು ಎಂದು ಸಚಿವ ಉಮೇಶ್ ಕತ್ತಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಗದಗ ತಾಲೂಕಿನ ಬಿಂಕದಕಟ್ಟಿ ಉದ್ಯಾನ ಉದ್ಘಾಟನೆಗೂ ಮುನ್ನ ಮಾತನಾಡಿ, ಕೆಂಪಯ್ಯ ಯಾರು ಅನ್ನೋದು ಗೊತ್ತಿಲ್ಲ. ಬಹಳ ಮಂದಿ ಅಸೋಸಿಯೇಷನ್ ಅಧ್ಯಕ್ಷರಿದ್ದಾರೆ. ಅದರಲ್ಲಿ ಕೆಂಪಯ್ಯ ಕೂಡಾ ಒಬ್ಬರು. ಅವರು ಬರೀ ಆರೋಪ ಮಾಡುವ ಬದಲು ಲೋಕಾಯುಕ್ತ ಅಥವಾ ಸಿಬಿಐಗೆ ದೂರು ಕೊಡಲಿ ಎಂದರು.
ಉ.ಕರ್ನಾಟಕ್ಕೆ ಅನ್ಯಾಯವಾದರೆ ರಾಜೀನಾಮೆ: ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹ ಮಾಡಿದರೆ ರಾಜೀನಾಮೆ ನೀಡುತ್ತೇನೆ. ಉತ್ತರ ಕರ್ನಾಟಕದ ಅಭಿವೃದ್ಧಿ ನಿಂತರೆ ಹೋರಾಟ ಮಾಡಲೂ ಸಿದ್ದ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ : ನೇಮಕಾತಿ ಪರೀಕ್ಷೆಗಳ ಅಕ್ರಮ ಸರ್ಕಾರದ ಯೋಗ್ಯತೆಗೆ ಹಿಡಿದ ಕನ್ನಡಿ: ಸಿದ್ದರಾಮಯ್ಯ