ಗದಗ: ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದಾಗ ಬೈಕ್ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದು, ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಬರದೂರ ಗ್ರಾಮದ ಬಳಿ ನಡೆದಿದೆ.
ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬ ಮಹಿಳೆಗೆ ಗಾಯಗಳಾಗಿವೆ. ಮೃತರನ್ನ ಅಡವಿಸೋಮಾಪೂರ ಗ್ರಾಮದ ಪ್ರಕಾಶ್ (18), ನಾಗರಹಳ್ಳಿ ಗ್ರಾಮದ ರೇಣುಕಾ (48) ಎಂದು ಗುರುತಿಸಲಾಗಿದೆ. ನಾಗಹಳ್ಳಿಗ್ರಾಮದ ಕವಿತಾ (20) ತೀವ್ರವಾಗಿ ಗಾಯಗೊಂಡಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿನ್ನೆ ಗದಗ ತಾಲೂಕಿನ ಅಡವಿಸೋಮಾಪುರಕ್ಕೆ ಮದುವೆಗೆ ಬಂದಿದ್ದು, ಇಂದು ಬೆಳಿಗ್ಗೆ ಒಂದೇ ಬೈಕ್‌ನಲ್ಲಿ ಮೂವರು ತೆರಳುತ್ತಿದ್ದರು ಎಂದು ಹೇಳಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.