ಗದಗ : ಗದಗ ತಾಲೂಕಿನ ನಾಗಾವಿ ಗ್ರಾಮದ ಹೊರವಲಯದಲ್ಲಿ ಕುಸಿದಿದ್ದ ರಸ್ತೆ ಕಂದಕಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮಂಜುನಾಥ್ ಮಾದರ್ (19), ಬಸವರಾಜ್ ಜವಳಬೆಂಚಿ (17) ಮೃತರು. ಲಕ್ಕುಂಡಿಯಿಂದ ಎಲೆಸಿರುಂದ ಗ್ರಾಮಕ್ಕೆ ಇಬ್ಬರು ಬೈಕ್ನಲ್ಲಿ ಹೊಗುತ್ತಿದ್ದಾಗ ಅವಘಡ ಸಂಭವಿಸಿದೆ.
ಹುಟ್ಟುಹಬ್ಬ ಆಚರಣೆಗೆ ಹೋಗುತ್ತಿದ್ದ ಯುವಕರು: ಮಂಜುನಾಥ್ ಮಾದರ್ ಅವರು ಸಂಬಂಧಿಕರ ಮನೆಗೆ ಬರ್ತಡೇ ಆಚರಣೆಗೆ ಸ್ನೇಹಿತ ಬಸವರಾಜ್ ಜೊತೆ ಹೋಗುತ್ತಿದ್ದರು. ನಾಗಾವಿ-ಬೆಳದಡಿ ಮಧ್ಯದ ರಸ್ತೆಯಲ್ಲಿ ಕಂದಕ ಬಿದ್ದಿದ್ದು, ಸಂಜೆ ಏಳು ಗಂಟೆ ಸುಮಾರಿಗೆ ಕತ್ತಲಲ್ಲೇ ಬೈಕ್ನಲ್ಲಿ ಸಾಗುವಾಗ ಕಂದಕ ಗಮನಿಸದೇ ಬಿದ್ದಿದ್ದಾರೆ.
ಇದನ್ನೂ ಓದಿ: ನವರಾತ್ರಿಯ ದೀಪ ತರುತ್ತಿದ್ದ ಯುವಕನಿಗೆ ವಾಹನ ಡಿಕ್ಕಿ.. ಸ್ಥಳದಲ್ಲಿಯೇ ಸಾವು
50 ಅಡಿ ಕಂದಕ ಬಿದ್ದರೂ ಎಚ್ಚರಿಕೆ ಫಲಕವಿಲ್ಲ: ಬ್ಯಾರಿಕೇಡ್, ಸುರಕ್ಷತಾ ಫಲಕ ಅಳವಡಿಸದಿರುವುದೇ ಸಾವಿಗೆ ಕಾರಣ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಕಂದಕ ಬಿದ್ದು ಸುಮಾರು ತಿಂಗಳಾಗಿದ್ದರೂ ಬ್ಯಾರಿಕೇಡ್ ಹಾಕಿಲ್ಲ, ಪೊಲೀಸರನ್ನ ನಿಯೋಜಿಸಿಲ್ಲ. ಹೀಗಾಗಿ, ಅಧಿಕಾರಿಗಳು, ಜನಪ್ರತಿನಿಧಿಗಳೇ ಇವರ ಸಾವಿಗೆ ನೇರ ಹೊಣೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ.. ಎಎಸ್ಐ ಪತ್ನಿ, ಪುತ್ರಿ, ಕಾರು ಚಾಲಕ, ಓರ್ವ ಅಜ್ಜಿ ಸೇರಿ ನಾಲ್ವರು ಸಾವು
ಡಿಸಿ ಬರುವವರೆಗೆ ಮೃತದೇಹ ಮೇಲೆತ್ತದಿರಲು ನಿರ್ಧಾರ: ಮೃತ ದಲಿತ ಯುವಕರ ಕುಟುಂಬಕ್ಕೆ ಧನ ಸಹಾಯ ನೀಡಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ ಬಳಿಕ ಶವ ಮೇಲೆತ್ತಲು ಅವಕಾಶ ಕೊಡುತ್ತೇವೆ ಅಂತಾ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇತ್ತ ಸ್ಥಳದಲ್ಲಿ ಅಗ್ನಿಶಾಮಕ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.