ಗದಗ: ಚಾಲಕನ ನಿಯಂತ್ರಣ ತಪ್ಪಿ ಈರುಳ್ಳಿ ಲೋಡ್ ಮಾಡಲಾಗಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿರುವ ಪರಿಣಾಮ ಇಬ್ಬರು ಮೃತಪಟ್ಟು, ನಾಲ್ವರಿಗೆ ಗಾಯಗಳಾಗಿರುವ ಘಟನೆ ನರಗುಂದ ತಾಲೂಕಿನ ರಡ್ಡೆರ ನಾಗನೂರು ಗ್ರಾಮದಲ್ಲಿ ನಡೆದಿದೆ.
ರಡ್ಡೆರ ನಾಗನೂರು ಗ್ರಾಮದ ಲಕ್ಷ್ಮವ್ವ (45) ಹಾಗೂ ಯಮನಮ್ಮ(60) ಮೃತ ದುರ್ದೈವಿಗಳಾಗಿದ್ದಾರೆ. ಗಾಯಗೊಂಡಿರುವ ನಾಲ್ವರು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಗ್ರಾಮದ ಮುದ್ದಿಗೌಡ ಗದ್ದಿಗೌಡ್ರ ಎಂಬ ರೈತರ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದ ಕೂಲಿ ಕಾರ್ಮಿಕರು, ಈರುಳ್ಳಿ ಕಟಾವು ಮಾಡಿ ಹೇರಿಕೊಂಡು ಮರಳಿ ಮನೆಗೆ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಕಂದಕಕ್ಕೆ ಉರುಳಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಬಸ್ - ಟ್ರಕ್ ನಡುವೆ ಭೀಕರ ಅಪಘಾತ.. ಆರು ಮಂದಿ ದುರ್ಮರಣ, 16 ಜನರ ಸ್ಥಿತಿ ಗಂಭೀರ