ಗದಗ: ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದೂವರೆಗೂ ಪರೀಕ್ಷೆಗೆ ಕಳಿಸಿದ್ದ ರಕ್ತದ ಮಾದರಿಗಳು ನೆಗೆಟಿವ್ ಬಂದಿರೋದ್ರಿಂದ ಮುಂದೆಯೂ ಇದೇ ಸ್ಥಿತಿಯನ್ನು ಮುಂದುವರೆಸಬೇಕೆಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಇನ್ನು ಇದುವರೆಗೆ ಗದಗ ಜಿಲ್ಲೆಯಲ್ಲಿ 180 ಜನರ ಮೇಲೆ ನಿಗಾವಹಿಸಲಾಗಿದೆ. ಇದರಲ್ಲಿ 28 ದಿನಗಳ ನಿಗಾ ಅವಧಿ ಪೂರೈಸಿದವರು 12 ಜನ ಇದ್ದಾರೆ. ಇನ್ನು 162 ಜನರನ್ನ ಮನೆಯಲ್ಲಿಯೇ ಇರಿಸಿ ಪ್ರತ್ಯೇಕ ನಿಗಾವಹಿಸಲಾಗಿದೆ. ಆರು ಜನರನ್ನ ವೈದ್ಯಕೀಯ ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.
ಇದೂವರೆಗೂ 42 ಜನರ ರಕ್ತ ಮಾದರಿ ಪರೀಕ್ಷಾ ವರದಿ ನೆಗಟಿವ್ ಎಂದು ಬಂದಿದ್ದು, ಜಿಲ್ಲೆಯ ಜನರು ನಿಟ್ಟಿಸಿರು ಬಿಟ್ಟಿದ್ದಾರೆ. ಉಳಿದಂತೆ ಯಾವುದೇ ವರದಿ ಬರಲು ಬಾಕಿ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ.