ETV Bharat / state

ನರಗುಂದ ತಹಶೀಲ್ದಾರ್​​​ ಕಾರಿಗೆ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡ ಗ್ರಾಮಸ್ಥರು

author img

By

Published : Oct 1, 2020, 3:11 PM IST

ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ರಾತ್ರಿಯಿಡೀ ಮಳೆ ಸುರಿದ ಕಾರಣ ಪರಿಸ್ಥಿತಿ ವಿಚಾರಿಸಲು ನರಗುಂದ ತಹಶೀಲ್ದಾರರಾದ ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿದಾಗ ಜನರು ಕಾರನ್ನು ಮುತ್ತಿಕೊಂಡು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

The villagers crowded the Tahsildar car in Naragunda...
ನರಗುಂದ ತಹಶೀಲ್ದಾರರ ಕಾರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು....

ಗದಗ: ಮಳೆ ಅವಾಂತರದಿಂದ ರಾತ್ರಿಯಿಡೀ ಪರದಾಡಿದ ಬೂದಿಹಾಳ ಗ್ರಾಮಸ್ಥರು ಗ್ರಾಮಕ್ಕೆ ಭೇಟಿ ನೀಡಿದ ನರಗುಂದ ತಹಶೀಲ್ದಾರರ ಕಾರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ನರಗುಂದ ತಹಶೀಲ್ದಾರರ ಕಾರಿಗೆ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡ ಗ್ರಾಮಸ್ಥರು....

ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ರಾತ್ರಿಯಿಡೀ ಮಳೆ ಸುರಿದ ಕಾರಣ ಪರಿಸ್ಥಿತಿ ವಿಚಾರಿಸಲು ನರಗುಂದ ತಹಶೀಲ್ದಾರರಾದ ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿದಾಗ ಜನರು ಕಾರನ್ನು ಮುತ್ತಿಕೊಂಡ ಘಟನೆ ನಡೆದಿದೆ.

ಅಷ್ಟೇ ಅಲ್ಲ ಅವರೊಂದಿಗೆ ಗದಗ ಜಿಲ್ಲಾ‌ ಪಂಚಾಯತ್ ಅಧ್ಯಕ್ಷ ರಾಜುಗೌಡ ಕೆಂಚನ್ನಗೌಡ್ರು ಕೂಡ ಗ್ರಾಮಕ್ಕೆ ಭೇಟಿ ಕೊಟ್ಟಿದ್ದು, ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು. ಸತತ ಮಲಪ್ರಭಾ ನದಿಯ ಪ್ರವಾಹದಿಂದಾಗಿ ತತ್ತರಿಸಿದ್ದ ಬೂದಿಹಾಳ ಗ್ರಾಮಸ್ಥರನ್ನು ಇತ್ತೀಚೆಗೆ ಹೊಸ ಬೂದಿಹಾಳ ಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಈಗ ನೋಡಿದ್ರೆ ಹೊಸ ಬೂದಿಹಾಳ ಗ್ರಾಮಕ್ಕೂ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಈ ವೇಳೆ ಅಧಿಕಾರಿ ಮತ್ತು ಜನಪ್ರತಿನಿಧಿಗಳಲ್ಲಿ ನೀರು ನುಗ್ಗದಂತೆ ತಡೆಗೋಡೆ ನಿರ್ಮಾಣ ‌ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸದ್ಯ ಗ್ರಾಮಸ್ಥರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ‌ ಗ್ರಾಮಸ್ಥರು ಕಾರನ್ನು ಹೋಗಲು ಬಿಟ್ಟಿದ್ದಾರೆ. ಜೊತೆಗೆ ಸದ್ಯಕ್ಕೆ ಸರ್ಕಾರಿ ಶಾಲೆಯಲ್ಲಿ ಪರಿಹಾರ ಕೇಂದ್ರವನ್ನು ಆರಂಭ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.