ETV Bharat / state

ಚಂದ್ರಯಾನ ವಿಫಲವಾಗಲು, ದೈವ ಶಕ್ತಿ ಮೇಲಿನ ನಂಬಿಕೆಯ ಕೊರತೆಯೇ ಕಾರಣ: ಕೋಡಿಮಠಶ್ರೀ - ಸರ್ಕಾರ ಸುಭದ್ರ ಎಂದ ಕೋಡಿಶ್ರೀ

ಚಂದ್ರಯಾನ ವಿಫಲವಾಗಲು, ದೈವ ಶಕ್ತಿ ಮೇಲಿನ ನಂಬಿಕೆ ಕೊರತೆಯೇ ಕಾರಣ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

Shivananda Shivayogi Rajendra Sri
ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ
author img

By

Published : Feb 9, 2020, 1:58 PM IST

ಗದಗ: ಜಗತ್ತಿನಲ್ಲಿ ಒಂದು ಶಕ್ತಿಯಾಗಿ ಮನುಷ್ಯ ಬಹಳ ಎತ್ತರಕ್ಕೆ ಬೆಳೆದಿದ್ದಾನೆ. ಇದರಲ್ಲಿ ಯಾವುದೋ ಒಂದು ಶಕ್ತಿ ಅಡಗಿದ್ದು, ಅದು ಇಡೀ ಜಗತ್ತನ್ನು ನಿಯಂತ್ರಣ ಮಾಡುತ್ತಿದೆ. ಅದನ್ನೆ ನಾವು ದೈವ ಶಕ್ತಿಯೆಂದು ಕರೆಯಬಹುದು. ಅಂತಹ ದೈವ ಶಕ್ತಿ ಮುನಿದರೆ ಮನುಷ್ಯನ ಎಲ್ಲಾ ಪ್ರಯತ್ನವು ವಿಫಲವಾಗುತ್ತವೆ‌. ಉದಾಹರಣೆಗೆ ಚಂದ್ರಯಾನ ವಿಫಲವಾಗಲು, ದೈವ ಶಕ್ತಿ ಮೇಲಿನ ನಂಬಿಕೆಯ ಕೊರತೆಯೇ ಕಾರಣ ಎಂದು ಕೊಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ

ಈ ವರ್ಷವೂ ಸಹ ಉತ್ತಮ‌ ಮಳೆಯಾಗಲಿದ್ದು, ನೀರು, ಬೆಂಕಿ, ಗಾಳಿಯಿಂದ ಮನಕುಲವು ವಿನಾಶಕಾರಿಯಾಗಲಿವೆ ಎಂದ ಅವರು, ದೈವ ಶಕ್ತಿ ಮುನಿದರೆ ಮನುಷ್ಯನ ಎಲ್ಲಾ ಪ್ರಯತ್ನವೂ ವಿಫಲವಾಗುತ್ತದೆ. ಉದಾಹರಣೆಗೆ ರೆಕ್ಕೆ ಇಲ್ಲದ ಹಕ್ಕಿಗಳು ಹಾರಾಡಿವೆ, ಎತ್ತುಗಳು ಇಲ್ಲದ ಗಳವನ್ನು ಹೊಡೆದಾರು, ಎಣ್ಣೆ ಇಲ್ಲದ ದೀಪವನ್ನು ಉರಿಸ್ಯಾರು, ವಿಜ್ಞಾನದ ಅವಿಷ್ಕಾರದಿಂದ ವಿಮಾನ, ಟ್ರ್ಯಾಕ್ಟರ್ ವಾಹನ ಹಾಗೂ ಸಿಲಿಂಡರ್​​​ನಂತಹ ಸಾಧನಗಳನ್ನು ಮನುಷ್ಯ ಕಂಡು ಹಿಡಿದಿದ್ದಾನೆ.

ಪ್ರಕೃತಿಯ ಒಳ್ಳಗುಟ್ಟನ್ನು ಬೇದಿಸುತ್ತಾ ಹೋದಂತೆ ಪ್ರಕೃತಿ ಮನುಷ್ಯನಿಗೆ ಸಹಕಾರಿಯಾಗುತ್ತೆ ಹಾಗೇ ವಿಷಕಾರಿಯು ಸಹ ಆಗುತ್ತೆ. ಹಾಗಾಗಿ ಹೊಸ ಹೊಸ ರೋಗಗಳು ಉತ್ಪತಿಯಾಗುತ್ತವೆ.‌ ಮನುಷ್ಯ ತನ್ನ ಸಂಪಾದನೆಗೆ ಪ್ರಕೃತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ. ಗಾಳಿ, ಬೆಂಕಿ ಅವಘಡ ಆಗುತ್ತವೆ. ಭೂಮಿ ತಲ್ಲಣಗೊಳ್ಳುತ್ತದೆ. ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತದೆ. ಮನುಷ್ಯ ಎಲ್ಲಿ‌ ಎಡೆವಿದ್ದಾನೋ ಅಲ್ಲಿಯೇ ಸರಿ ಪಡಿಸಿಕೊಳ್ಳಬೇಕು ಎಂದರು.

ಇನ್ನು ಔಷಧಿಗಳು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಪ್ರಕೃತಿಯಿಂದ ಹೆಚ್ಚು ರೋಗಗಳು ಆವರಿಸುತ್ತವೆ. ಮನುಷ್ಯನಿಗೆ ಮದ್ದಿಲ್ಲದ(ಔಷಧ) ಕಾಯಿಲೆಗಳು ಬರ್ತಾವೆ. ಅದಕ್ಕೆ ಜನ ಭಗವಂತನ ಮೊರೆ ಹೋಗುವುದು ಒಂದೇ ದಾರಿ ಎಂದರು. ಇನ್ನು ಸರ್ಕಾರದ ಬಗ್ಗೆ ಮಾತನಾಡಿದ ಶ್ರೀಗಳು ಸರ್ಕಾರಕ್ಕೆ ಸದ್ಯ ಯಾವುದೇ ಭಯವಿಲ್ಲ, ಸರ್ಕಾರ ಸುಭದ್ರವಾಗಿ ಇರುತ್ತದೆ. ಯುಗಾದಿ ನಂತರ ಮತ್ತೆ ಭವಿಷ್ಯ ನುಡಿಯುತ್ತೇನೆ, ಮುಂದೆಯು ಸಹ ಸರ್ಕಾರ ಸುಭದ್ರವಾಗಿ ಇರುತ್ತೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.