ಗದಗ: ವಿಧಾನ ಪರಿಷತ್ನಲ್ಲಿ ಉಪಸಭಾಪತಿಗಳ ಗಲಾಟೆ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಈ ಮುಂಚೆ ಹೊರಗಡೆ ಗೂಂಡಾಗಿರಿ ಮಾಡುತ್ತಿದ್ರು. ಈಗ ವಿಧಾನ ಪರಿಷತ್ ಒಳಗೂ ಗೂಂಡಾಗಿರಿ ನಡೆಸಿರುವುದು ಹೇಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ಗೆ ಇತಿಹಾಸ, ಪರಂಪರೆ, ತನ್ನದೇಯಾದ ಗೌರವವಿದೆ. ಜ್ಞಾನಿಗಳು, ವಿದ್ವಾಂಸರು ಇರುವ ಕ್ಷೇತ್ರವದು. ಆದರೆ ಕಾಂಗ್ರೆಸ್ ಯಾವಾಗ ಅಧಿಕಾರ ಕಳೆದು ಕೊಂಡಿದೆಯೋ ಆಗಿನಿಂದ ಗೂಂಡಾಗಿರಿ ಮಾಡಿಕೊಂಡು ಬಂದಿದೆ. ಸಭಾಧ್ಯಕ್ಷರು, ಉಪ ಸಭಾಪತಿ ಪೀಠ ಆದರ್ಶ ಹಾಗೂ ಶ್ರೇಷ್ಠವಾದದ್ದು. ಪೀಠದಲ್ಲಿ ಕೂತವರನ್ನು ಎತ್ತಿ ಹಾಕೋದು, ಎಳೆಯೋದು ಕಾಂಗ್ರೆಸ್ನ ಮಾನಸಿಕತೆ ಎಷ್ಟಿದೆ ಎಂದು ತೋರುತ್ತದೆ. ಕಾಂಗ್ರೆಸ್ಗೆ ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ ಗೌರವ ಇಲ್ಲ. ಅಧಿಕಾರದ ಕುರ್ಚಿ ಮೇಲೆ ಗೌರವ ಇದೆ ಎಂದು ವ್ಯಂಗ್ಯವಾಡಿದರು.
ಕಲಾಪದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಢ ವಿಧಿಸುವ ಕುರಿತು ಮಾತನಾಡಿ, ಜನಪ್ರತಿನಿಧಿಗಳಿಗೊಂದು, ಜನಸಾಮಾನ್ಯರಿಗೆ ಒಂದು ನ್ಯಾಯವಿಲ್ಲ. ಈ ಬಗ್ಗೆ ಬಿಜೆಪಿ ಕಾನೂನು ಹೋರಾಟ ನಡೆಸಿದೆ. ನಮ್ಮ ಸರ್ವಸಮ್ಮತ ನಾಯಕ ಯಡಿಯೂರಪ್ಪ ಕ್ರಮ ಕೈಗೊಳ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.