ಗದಗ : ವೈದಿಕ ವಿಧಿ, ವಿಧಾನಗಳಿಲ್ಲ. ಮಾಂಗಲ್ಯಧಾರಣೆಯೂ ಇಲ್ಲ. ಇವರಿಗೆ ಸಂವಿಧಾನವೇ ಸಾಕ್ಷಿ. ಹೀಗೆ ನವಜೋಡಿಯೊಂದು ಗದಗ ನಗರದಲ್ಲಿ ಸರಳವಾಗಿ ವಿವಾಹವಾದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕಲಬುರಗಿಯ ಪೂಜಾ ಮತ್ತು ಗದಗದ ಸೋಮಶೇಖರ್ ಬಾಳ ಸಂಗಾತಿಯಾಗಿ ಹೊಸ ಬದುಕಿಗೆ ಮುಂದಡಿ ಇಟ್ಟರು.
ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಅವರು ಸಂವಿಧಾನ ಸಾಕ್ಷಿಯಾಗಿ ಪ್ರತಿಜ್ಞೆ ಬೋಧನೆ ಮಾಡಿದರು. ಈ ಮೂಲಕ ನೂತನ ವಧು-ವರ ಪರಸ್ಪರ ಹಾರ ಬದಲಾಯಿಸಿಕೊಂಡರು. ಅತಿಥಿಗಳಿಗೆ ವಚನ ಸಾಹಿತ್ಯದ ಪುಸ್ತಕಗಳನ್ನು ಉಡುಗೊರೆ ನೀಡಲಾಯಿತು. ಬಂಧು-ಬಳಗ, ಸ್ನೇಹಿತರಿದ್ದರು. ಜ್ಯೋತಿ ಬಾ ಪುಲೆ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಅವರ ಸಾಧನೆಗಳನ್ನು ನೆನೆದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬುದ್ಧ, ಬಸವ, ಅಂಬೇಡ್ಕರ್ ಆದರ್ಶಗಳನ್ನು ಕೊಂಡಾಡಿದರು.
ಇದನ್ನೂ ಓದಿ: ಪವಿತ್ರ ಬಂಧನಕ್ಕೆ ತೆಲುಗು ನಟ ನರೇಶ್ ಸಜ್ಜು.. ವಿಡಿಯೋ ಮೂಲಕ ಶುಭಸುದ್ದಿ ಹಂಚಿಕೊಂಡ ಜೋಡಿ