ಗದಗ: ಜಿಲ್ಲೆಯ ಬೆಣ್ಣೆಹಳ್ಳದ ಪ್ರವಾಹದಲ್ಲಿ ನಿನ್ನೆ ರಾತ್ರಿ ಸಹೋದರರಿಬ್ಬರು ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಡಿಆರ್ಎಫ್ ತಂಡದಿಂದ ಸಹೋದರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ.
ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಳವಾಡ ಗ್ರಾಮದ ಬಳಿ ತುಂಬಿ ಹರಿಯುತ್ತಿರೋ ಬೆಣ್ಣೆಹಳ್ಳದಲ್ಲಿ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಯುವಕರು ಗಂಗಾ ಪೂಜೆಗೆಂದು ನೀರು ತರಲು ಹೋದಾಗ ಕೊಚ್ಚಿ ಹೋಗಿದ್ದಾರೆ.
ಕಳಸಪ್ಪ(30) ಹಾಗೂ ಈರಣ್ಣ(15) ಎಂಬ ಸಹೋದರರು ಹಳ್ಳದ ರಭಸದಲ್ಲಿ ನೀರುಪಾಲಾಗಿದ್ದಾರೆ. ಗದಗ ಜಿಲ್ಲೆ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.