ಗದಗ: ನರಗುಂದ ತಾಲೂಕಿನ ಕೊಣ್ಣೂರ ಮತ್ತು ಬೆಳ್ಳೇರಿ ಗಂಜಿ ಕೇಂದ್ರಗಳಿಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ಮಲಪ್ರಭಾ ನೆರೆ ಹಾವಳಿಯಿಂದಾಗಿ ಜಿಲ್ಲೆಯ ಸುಮಾರು 16 ಹಳ್ಳಿಗಳು ತತ್ತರಿಸಿ ಹೋಗಿವೆ. ಪರಿಣಾಮ ಹಲವು ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನ ತೆರೆಯಲಾಗಿದೆ.
ನರಗುಂದ ತಾಲೂಕಿನ ಲಖಮಾಪೂರಕ್ಕೂ ಭೇಟಿ ನೀಡಿದ ಪಾಟೀಲ್ ಪ್ರವಾಹ ಸಂತ್ರಸ್ಥರ ಸಮಸ್ಯೆ ಕೇಳಿದರು. ನಂತರ ಗ್ರಾಮದ ಸಂಪೂರ್ಣ ಸ್ಥಳಾಂತರಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜುಗೌಡ ಪಾಟೀಲ್, ತಾ.ಪಂ.ಅಧ್ಯಕ್ಷರಾದ ಆರ್. ಆರ್. ತಿಮ್ಮಾರಡ್ಡಿ ಸೇರಿದಂತೆ ಹಲವು ಅಧಿಕಾರಿಗಳಿದ್ದರು.