ETV Bharat / state

ಈಟಿವಿ ವರದಿಗೆ ಎಚ್ಚೆತ್ತ ಗ್ರಾಮಸ್ಥರು: ಲೈಂಗಿಕ ಕಿರುಕುಳ ನೀಡಿದ ಪಂಚಾಯತ್ ಸದಸ್ಯನ ವಿರುದ್ಧ ಡಿಸಿಗೆ ದೂರು - ಚಿಂಚಲಿ ಗ್ರಾಮ ಪಂಚಾಯತಿ

ಈತನ ಕುರಿತು ಈಟಿವಿ ಭಾರತ 'ಅಂಗನವಾಡಿ ಕಾರ್ಯಕರ್ತೆಗೆ ಗ್ರಾಪಂ ಸದಸ್ಯನಿಂದ ಲೈಂಗಿಕ ಕಿರುಕುಳ ಆರೋಪ’ನ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಇದಾದ ಬಳಿಕ ಗ್ರಾಮಸ್ಥರು ಆತನ ಸದಸ್ಯತ್ವ ರದ್ದು ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

request-for-cancellation-gram-panchayat-membership-of-man-in-wake-of-etv-bharat-report
ಲೈಂಗಿಕ ಕಿರುಕುಳ ನೀಡಿದ ಗ್ರಾಪಂ ಸದಸ್ಯನ ವಿರುದ್ಧ ಡಿಸಿಗೆ ದೂರು
author img

By

Published : Jan 7, 2021, 10:19 PM IST

ಗದಗ: ತಾಲೂಕಿನ ಚಿಂಚಲಿ ಗ್ರಾಮ ಪಂಚಾಯಿತಿ ಸದಸ್ಯ ಮುತ್ತಪ್ಪ ಸಂದಕದ ಅಂಗನವಾಡಿ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿ ಬ್ಲಾಕ್​ ಮಾಡುತ್ತಿದ್ದ ಕುರಿತು ಈಟಿವಿ ಭಾರತ್ ಸುದ್ದಿ ಪ್ರಕಟಿಸುತ್ತಿದ್ದಂತೆ ಆತನ ಸದಸ್ಯತ್ವ ರದ್ದತಿಗೆ ಆಗ್ರಹಿಸಿ ಜನತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ನೂತನವಾಗಿ ಆಯ್ಕೆಯಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಮುತ್ತಪ್ಪ ಸಂದಕದ 40 ಸಾವಿರ ಹಣ ನೀಡುವಂತೆ ಹಾಗೂ ಹಣ ಕೊಡದೇ ಇದ್ದರೆ ನಿನ್ನ ದೇಹ ಒಪ್ಪಿಸು ಅಂತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಲೈಂಗಿಕ ಕಿರುಕುಳ ನೀಡಿದ ಗ್ರಾಪಂ ಸದಸ್ಯನ ವಿರುದ್ಧ ಡಿಸಿಗೆ ದೂರು

ಈ ಕುರಿತು ಈಟಿವಿ ಭಾರತ 'ಅಂಗನವಾಡಿ ಕಾರ್ಯಕರ್ತೆಗೆ ಗ್ರಾಪಂ ಸದಸ್ಯನಿಂದ ಲೈಂಗಿಕ ಕಿರುಕುಳ ಆರೋಪ’ನ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಇದಾದ ಬಳಿಕ ಗ್ರಾಮಸ್ಥರು ಆತನ ಸದಸ್ಯತ್ವ ರದ್ದು ಮಾಡುವಂತೆ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಅವರಿಗೆ ಅಪರ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ.

ಮಹಿಳೆಯ ಮನೆಗೆ ಮಂಜೂರಾಗಿದ್ದ ಮನೆಯ 4ನೇ ಬಿಲ್​​ ನಾನೇ ತಡೆ ಹಿಡಿದಿದ್ದೇನೆ. ತನಗೆ 40 ಸಾವಿರ ರೂಪಾಯಿ ಹಣ ನೀಡುವಂತೆ ಮುತ್ತಪ್ಪ ಪೀಡಿಸುತ್ತಿದ್ದ. ಹೀಗಾಗಿ ಎಚ್ಚೆತ್ತುಕೊಂಡ ಗ್ರಾಮಸ್ಥರು ಸದಸ್ಯತ್ವ ರದ್ದು ಮಾಡಿ. ಮರು ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.

ಈ ಸದಸ್ಯನ ಹಲವು ಅಧಿಕಾರಿಗಳಿಗೂ ತಲೆನೋವಾಗಿದ್ದಾನೆ ಎನ್ನುವ ಆರೋಪಗಳು ಇವೆ. ಹಲವು ಅಧಿಕಾರಿಗಳಿಗೆ ಆರ್​​ಟಿ ಮೂಲಕ ಅರ್ಜಿ ಹಾಕಿ ಅವರನ್ನು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿರೋ ಬಗ್ಗೆ ದೂರುಗಳು ಸಹ ಇವೆಯಂತೆ.

ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಗೆ ಗ್ರಾಪಂ ಸದಸ್ಯನಿಂದ ಲೈಂಗಿಕ ಕಿರುಕುಳ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.