ETV Bharat / state

ಮಾರ್ಗ ಮಧ್ಯೆ ಹೊತ್ತಿ ಉರಿದ ಕಾರು.. ತಾಪಂ ಅಧ್ಯಕ್ಷ ಅಪಾಯದಿಂದ ಪಾರು - ಲಕ್ಷೇಶ್ವರ ಬಳಿ ಹೊತ್ತಿ ಉರಿದ ಕಾರು

ಸ್ವತಃ ಕಾರು ಚಲಾಯಿಸುತ್ತಿದ್ದ ಪರಸಪ್ಪ ಇಮ್ಮಡಿಯವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಧಾವಿಸಿ ಬಂದ ಸ್ಥಳೀಯರು ಬೆಂಕಿ ನಂದಿಸಿದ್ದಾರೆ..

Renult duster Car Burned From Short Circute in Gadag
ಗದಗದಲ್ಲಿ ಮಾರ್ಗ ಮಧ್ಯೆ ಹೊತ್ತಿ ಉರಿದ ಕಾರು
author img

By

Published : Sep 8, 2020, 4:50 PM IST

ಗದಗ : ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ಚಲಿಸುತ್ತಿದ್ದ ಕಾರು ಹೊತ್ತಿ ಉರಿದ ಘಟನೆ ಲಕ್ಷ್ಮೇಶ್ವರ ತಾಲೂಕು ಬಟ್ಟೂರ ಬಳಿ ನಡೆದಿದೆ.

ಲಕ್ಷ್ಮೇಶ್ವರ ತಾಲೂಕು ಪಂಚಾಯತ್​​ ಅಧ್ಯಕ್ಷ ಪರಸಪ್ಪ ಇಮ್ಮಡಿಯವರು ಸಂಚರಿಸುತ್ತಿದ್ದ ಡಸ್ಟರ್​ ಕಾರು ರಸ್ತೆ ಮಧ್ಯದಲ್ಲೇ ಸುಟ್ಟು ಕರಕಲಾಗಿದೆ. ಬಟ್ಟೂರದಿಂದ ಲಕ್ಷ್ಮೇಶ್ವರಕ್ಕೆ ಹೋಗುವ ಮಾರ್ಗ ಮಧ್ಯೆ ಏಕಾಏಕಿ ಬೆಂಕಿ ಹತ್ತಿಕೊಂಡು ಕಾರು ಹೊತ್ತಿ ಉರಿದಿದೆ.

ಸ್ವತಃ ಕಾರು ಚಲಾಯಿಸುತ್ತಿದ್ದ ಪರಸಪ್ಪ ಇಮ್ಮಡಿಯವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಧಾವಿಸಿ ಬಂದ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.