ETV Bharat / state

ಗದಗ ಮಾರುಕಟ್ಟೆಯಲ್ಲಿ ಕೆಂಪು ಸುಂದರಿಗೆ ಎಲ್ಲಿಲ್ಲದ ಬೇಡಿಕೆ: ಒಣಮೆಣಸಿಕಾಯಿಗೆ ಬಂತು ಬಂಗಾರದ ಬೆಲೆ - ಈಟಿವಿ ಭಾರತ್​ ಕನ್ನಡ

ಗದಗ ಎಪಿಎಂಸಿಯಲ್ಲಿ ಆರಂಭವಾದ ಆನ್‌ಲೈನ್ ಟೆಂಡರ್‌ನಿಂದ ಜಿಲ್ಲೆಯ ಒಣಮೆಣಸಿನಕಾಯಿ ಬೆಳೆಗಾರರಿಗೆ ಲಕ್ ಖುಲಾಯಿಸಿದೆ

ಗದಗ ಮಾರುಕಟ್ಟೆಯಲ್ಲಿ ಕೆಂಪು ಸುಂದರಿಗೆ ಎಲ್ಲಿಲ್ಲದ ಬೇಡಿಕೆ; ಒಣಮೆಣಸಿಕಾಯಿಗೆ ಬಂತು ಬಂಗಾರದ ಬೆಲೆ
red-chiili-got-huge-rate-in-gadag-market
author img

By

Published : Jan 18, 2023, 2:38 PM IST

ಗದಗ: ವಿಪರೀತ ಮಳೆಯಿಂದ ಇಲ್ಲಿಯ ರೈತರು ಕಂಗಲಾಗಿದ್ದರು. ಮಳೆಯಿಂದ ಎಲ್ಲ ಬೆಳೆಗಳು ನೆಲಕಚ್ಚಿದ್ದವು. ಆದರೆ, ಅಲ್ಪ ಸ್ವಲ್ಪವಾಗಿ ಬೆಳೆದ ಕೆಂಪು ಸುಂದರಿ ಎಂದು ಕರೆಸಿಕೊಳ್ಳುವ ಒಣಮೆಣಸಿನಕಾಯಿಗೆ ಈ ಸಾರಿ ಬಂಗಾರ ಮೀರಿಸುವತಹ ಬೆಲೆ ಬಂದಿದೆ. ಹಾಗಾಗಿ ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಗಮನಾರ್ಹ ಕೇಂದ್ರವಾಗಿ ಮಾರ್ಪಟ್ಟಿದೆ. ವರ್ಷದಿಂದ ವರ್ಷಕ್ಕೆ ಗದಗ ಎಪಿಎಂಸಿಗೆ ಸಾಕಷ್ಟು ಪ್ರಮಾಣದಲ್ಲಿ ಒಣಮೆಣಸಿಕಾಯಿ ಹರಿದು ಬರುತ್ತಿದೆ. ಜೊತೆಗೆ ದಾಖಲೆ ಬೆಲೆಗೂ ಮಾರಾಟವಾಗುತ್ತಿದೆ. ಹಾಗಾಗಿ ರಾಜ್ಯದ ಮೆಣಸಿನಕಾಯಿ ವ್ಯಾಪಾರಿಗಳ ಗಮನ ಸೆಳೆಯುತ್ತಿದೆ. ಪಕ್ಕದ ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಯ ರೈತರು ಮೆಣಸಿನಕಾಯಿ ಮಾರಾಟಕ್ಕೆ ಜಿಲ್ಲಾ ಎಪಿಎಂಸಿಗೆ ಬರಲಾರಂಭಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್​ನಲ್ಲಿ ಗದಗ ಎಪಿಎಂಸಿಗೆ 1,00,634 ಕ್ವಿಂಟಾಲ್ ಒಣಮೆಣಸಿನಕಾಯಿ ಬಂದಿದ್ದು, ಉತ್ತಮ ಹಾಗೂ ಗುಣಮಟ್ಟದ ಒಣಮೆಣಸಿನಕಾಯಿಗೆ ಕ್ವಿಂಟಾಲ್‌ಗೆ 70,639 ರೂ. ಗರಿಷ್ಠ ಬೆಲೆಗೆ ಮಾರಾಟವಾಗುವ ಮೂಲಕ ರಾಜ್ಯದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಈ ವರ್ಷ ಜನವರಿ 14ರ ವರೆಗೆ ಗದಗ ಎಪಿಎಂಸಿಗೆ 4,167 ಕ್ವಿಂಟಾಲ್ ಒಣಮೆಣಸಿಕಾಯಿ ಬಂದಿದ್ದು ಜ. 11ರಂದು ಗುಣಮಟ್ಟದ ಒಣಮೆಣಸಿನಕಾಯಿ ಕ್ವಿಂಟಾಲ್‌ಗೆ 72,999 ರೂ. ದಾಖಲೆ ಬೆಲೆಗೆ ಮಾರಾಟ ಆಗುವ ಮೂಲಕ ಎಪಿಎಂಸಿ ಗಮನಾರ್ಹ ಕೇಂದ್ರವಾಗಿ ಮಾರ್ಪಟ್ಟಿದೆ. ಅದಕ್ಕೂ ಮುನ್ನ ಜನವರಿ 14ರಂದು ಕ್ವಿಂಟಾಲ್‌ಗೆ 71,369 ರೂ. ಗರಿಷ್ಠ ಬೆಲೆಗೆ ಮಾರಾಟವಾಗಿತ್ತು.

ಗದಗ ಮಾರುಕಟ್ಟೆ ಆರಂಭದ ಬಳಿಕ ಅನುಕೂಲ: ಹಲವು ವರ್ಷಗಳಿಂದ ವಾಣಿಜ್ಯ ಬೆಳೆ ಒಣಮೆಣಸಿನಕಾಯಿ ಬೆಳೆಯುವಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯು ಅವುಗಳ ಮಾರಾಟಕ್ಕೆ ಹುಬ್ಬಳ್ಳಿ ಹಾಗೂ ಬ್ಯಾಡಗಿ ಮಾರುಕಟ್ಟೆಯನ್ನೇ ಅವಲಂಬಿಸಿತ್ತು. 2020ರಲ್ಲಿ ಗದಗ ಎಪಿಎಂಸಿಯಲ್ಲಿ ಆರಂಭವಾದ ಆನ್‌ಲೈನ್ ಟೆಂಡರ್‌ನಿಂದ ಜಿಲ್ಲೆಯ ಒಣಮೆಣಸಿನಕಾಯಿ ಬೆಳೆಗಾರರಿಗೆ ಲಕ್ ಖುಲಾಯಿಸಿದೆ ಎಂದೇ ಹೇಳಬಹುದು. ಆನ್‌ಲೈನ್ ಟೆಂಡರ್ ಪ್ರಾರಂಭವಾಗಿರುವುದರಿಂದ ಬ್ಯಾಡಗಿ ಎಪಿಎಂಸಿಗೆ ಬರುತ್ತಿದ್ದ ಒಣಮೆಣಸಿನಕಾಯಿ ಇದೀಗ ಗದಗ ಮಾರುಕಟ್ಟೆಗೆ ಬರಲು ಪ್ರಾರಂಭಿಸಿದೆ. ಬ್ಯಾಡಗಿಗೆ ತೆರಳುತ್ತಿದ್ದ ಮಾರಾಟಗಾರರು ಗದಗ ಎಪಿಎಂಸಿಗೆ ಧಾವಿಸುತ್ತಿರುವುದರಿಂದ ಒಣಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಗದಗ ಎಪಿಎಂಸಿ ಕೇಂದ್ರ ಬಿಂದು ಆಗಿದೆ.

ದಾಖಲೆ ಮೊತ್ತದಲ್ಲಿ ಮಾರಾಟ: ಆನ್‌ಲೈನ್ ಟೆಂಡರ್ ಆರಂಭ ಆಗುವುದಕ್ಕೂ ಮುನ್ನ ಗದಗ ಎಪಿಎಂಸಿಗೆ ಪ್ರತಿ ವರ್ಷ ಅಂದಾಜು 22,000 ಕ್ವಿಂಟಾಲ್‌ನಿಂದ 47,000 ಕ್ವಿಂಟಾಲ್‌ವರೆಗೆ ಬರುತ್ತಿದ್ದ ಒಣಮೆಣಸಿನಕಾಯಿ ಕ್ವಿಂಟಾಲ್‌ಗೆ ಗರಿಷ್ಠ 20,000 ರೂ.ಗೆ ಮಾರಾಟವಾಗುತ್ತಿತ್ತು. 2020ರಲ್ಲಿ ಆನ್‌ಲೈನ್ ಟೆಂಡರ್ ಆರಂಭವಾದ ಬಳಿಕ ಆವಕ ಜೊತೆಗೆ ಗರಿಷ್ಠ ಬೆಲೆಗೂ ಮಾರಾಟವಾಗುತ್ತಿರುವುದು ಗಮನಾರ್ಹ. ಇತ್ತೀಚಿಗೆ ಜನವರಿ 11ರಂದು ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸಾವಿತ್ರಿ ಉಮೇಶ ನಾಗರೆಡ್ಡಿ ಎಂಬುವವರು ಕ್ವಿಂಟಾಲ್‌ಗೆ 72,999 ರೂ.ಗೆ ಮಾರಾಟ ಮಾಡಿ ದಾಖಲೆ ಬರೆದರು. ಈ ಗರಿಷ್ಠ ಬೆಲೆ ಪಡೆದ ಆ ರೈತ ಮಹಿಳೆಯನ್ನು ಮಾರುಕಟ್ಟೆಯ ಸಿಬ್ಬಂದಿ ಸನ್ಮಾನ ಸಹ ಮಾಡಿದ್ದರು. ರಾಜ್ಯದ ಜನತೆ ಕೂಡ ಪ್ರಶಂಸೆ ವ್ಯಕ್ತಪಡಿಸಿ ಅವರನ್ನು ಕೊಂಡಾದಿದ್ದರು. ಇದಕ್ಕೂ ಮುನ್ನ ಕೋಟಮಚಗಿಯ ಶರಣಪ್ಪ ಎನ್ನುವ ರೈತ ಒಣಮೆಣಸಿನಕಾಯಿನ್ನು ಕ್ವಿಂಟಾಲ್‌ಗೆ 70,199 ರೂ. ಗೆ ಮಾರಾಟ ಮಾಡಿ ಭೇಷ್​ ಅನ್ನಿಸಿಕೊಂಡಿದ್ದರು.

ಗದಗ ಎಪಿಎಂಸಿಗೆ ಒಣಮೆಣಸಿನಕಾಯಿ ಆವಕ:

ವರ್ಷ; ಆವಕ (ಕ್ವಿಂಟಲ್‌ಗಳಲ್ಲಿ); ಗರಿಷ್ಠ ಬೆಲೆ (ರೂ.ಗಳಲ್ಲಿ)

2015; 19,400; 14,000

2016; 36,285; 18,000

2017; 47,924; 18,000

2018; 28,350; 20,000

2019; 22,923; 20,000

2020: 66349: 51,169

2021: 82260: 65,661

2022: 100634: 70,639

2023: 4167: 72999(ಜ. 14ರ ವರೆಗೆ)

ಜಿಲ್ಲೆಯಲ್ಲಿ ಒಣಬೇಸಾಯ ಕೃಷಿಯಿದ್ದು ಅಪಾರ ಪ್ರಮಾಣದಲ್ಲಿ ಸ್ಥಳೀಯ ಹಾಗೂ ಡಬ್ಬಿ ತಳಿಯ ಒಣಮೆಣಸಿಕಾಯಿ ಬೆಳೆಯುತ್ತಾರೆ. ಇದಕ್ಕೂ ಮುನ್ನ ಗದಗ ಜಿಲ್ಲೆಯಲ್ಲಿ ಬೆಳೆದ ಒಣಮೆಣಸಿನಕಾಯಿ ಬ್ಯಾಡಗಿ ಮಾರುಕಟ್ಟೆಗೆ ತೆರಳುತ್ತಿತ್ತು. ಗದಗ ಎಪಿಎಂಸಿಯಲ್ಲಿ ಆನ್‌ಲೈನ್ ಟೆಂಡರ್ ಪ್ರಕ್ರಿಯೆ ಆರಂಭವಾದ ನಂತರ ಜಿಲ್ಲೆ ಸೇರಿ ಪಕ್ಕದ ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಧಾವಿಸುತ್ತಿದ್ದಾರೆ. ಆದ್ದರಿಂದ ಒಳ ಬರುವ ಪ್ರಮಾಣ ಹೆಚ್ಚಳ ಆಗಿದೆ. ಜೊತೆಗೆ ವರ್ತಕರ ಪೈಪೋಟಿಯೂ ಹೆಚ್ಚಿದ್ದರಿಂದ ಉತ್ತಮ ಗುಣಮಟ್ಟದ ಒಣಮೆಣಸಿನಕಾಯಿ ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ ಎಂದು ಗದಗ ಎಪಿಎಂಸಿ ಕಾರ್ಯದರ್ಶಿ ರಾಜಣ್ಣ ಉಪಳ್ಳಿ ಅವರು ಕೆಂಪು ಸುಂದರಿಯ ಆವಕ ಮತ್ತು ಗರಿಷ್ಠ ಬೆಲೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಾವೇರಿಯ ಪ್ರಸಿದ್ದ ಏಲಕ್ಕಿ ಹಾರ: ಜಾಗತಿಕ ನಾಯಕರ ಕೊರಳೇರಿದ ಹೆಗ್ಗಳಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.