ETV Bharat / state

ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದ ವಿದ್ಯಾರ್ಥಿ ಫೇಲ್ ​​: ಪಿಯು ಮಂಡಳಿ ಮಹಾ ಎಡವಟ್ಟು - Naragunda Taluk

ಪ್ರತಿಭಾವಂತ ವಿದ್ಯಾರ್ಥಿ ಉತ್ತಮ ಅಂಕ ಪಡೆದು ಪಾಸ್​ ಆಗಿದ್ದರೂ ಪಿಯು ಮಂಡಳಿ ನಿರ್ಲಕ್ಷ್ಯದಿಂದ ಅನುತೀರ್ಣವೆಂದು ಫಲಿತಾಂಶ ಬಂದಿದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾಗಲೂ ವಿದ್ಯಾರ್ಥಿಯ ಫಲಿತಾಂಶದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ..

ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದ ವಿದ್ಯಾರ್ಥಿ ಫೇಲ್​​: ಪಿಯು ಮಂಡಳಿ ಮಹಾ ಎಡವಟ್ಟು
author img

By

Published : Sep 2, 2020, 3:03 PM IST

ಗದಗ : ಪಿಯು ಪರೀಕ್ಷಾ ಮಂಡಳಿಯ ಎಡವಟ್ಟಿನಿಂದ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗೆ ಫೇಲ್​ ಎಂಬ ಫಲಿತಾಂಶ ಪ್ರಕಟಿಸಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಕೆಇಎಸ್​​ಪಿಯು ಕಾಲೇಜಿನ ಶಬ್ಬೀರ್ ಖಾಜಿ ಎಂಬ ವಿದ್ಯಾರ್ಥಿಯು ಪ್ರಥಮ ರ್ಯಾಂಕ್​​ಗಳಿಸಿ ಪಾಸ್ ಆಗಿದ್ದರೂ ಸಹ ಫೇಲ್ ಎಂದು ಫಲಿತಾಂಶ ನೀಡಿದ್ದಾರೆ.

ಎಲ್ಲ ವಿಷಯದಲ್ಲಿ 90ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಯನ್ನು ಇಂಗ್ಲಿಷ್​ ವಿಷಯದಲ್ಲಿ ಪಾಸ್ ಆಗಿದ್ದರೂ ಸಹ ಫೇಲ್ ಮಾಡಿ ಎಡವಟ್ಟು ಮಾಡಿದ್ದಾರೆ.

ಕೆಇಎಸ್​​ಪಿಯು ಕಾಲೇಜಿನ ವಿದ್ಯಾರ್ಥಿ ಶಬ್ಬೀರ್ ಖಾಜಿ

ಬಳಿಕ ಆತ ಉತ್ತರ ಪತ್ರಿಕೆಯ ಫೋಟೋ ಕಾಪಿ ತರಿಸಿದ್ದಲ್ಲದೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಫೋಟೋ ಕಾಪಿಯಲ್ಲಿ ನೋಡಿದಾಗ ಶೇ.54ರಷ್ಟು ಅಂಕ ಗಳಿಸಿರುವುದು ಪತ್ತೆಯಾಗಿದೆ. ಆದರೆ, ಮರು ಮೌಲ್ಯಮಾಪನದಲ್ಲೂ ವಿದ್ಯಾರ್ಥಿ ಉತ್ತೀರ್ಣ ಹೊಂದಿರುವ ಕುರಿತು ಮಾಹಿತಿಯನ್ನೇ ನೀಡದೇ ಎಡವಟ್ಟು ಮಾಡಿದ್ದಾರೆ. ಇದರಿಂದ ಇಲಾಖೆಯ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿ ಅಸಮಾಧಾನ ಹೊರಹಾಕಿದ್ದಾನೆ.

ಕಷ್ಟಪಟ್ಟು ಓದಿ ಉತ್ತಮ ಅಂಕಗಳಿಸಿದರೂ ಇಲಾಖೆಯ ಎಡವಟ್ಟಿನಿಂದ ವಿದ್ಯಾರ್ಥಿ ಜೀವನ ಅತಂತ್ರವಾಗಿದೆ. ಇಷ್ಟಾದರೂ ಇಲಾಖೆಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಕುರಿತು ಮಾತನಾಡಿದರೂ ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇನ್ನಾದರೂ ಇಲಾಖೆ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿ ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.