ಗದಗ: ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆ ಬಳಲಿದ್ದ ಎರಡು ಬಡಾವಣೆ ನಿವಾಸಿಗಳು ನಗರಸಭೆಗೆ ಎತ್ತಿನ ಬಂಡಿ ಸಮೇತ ಮುತ್ತಿಗೆ ಹಾಕಿ ನಗರಸಭೆ ಕಮೀಷನರ್ಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ವೀರ ನಾರಾಯಣ ಬಡಾವಣೆ, ಕೆ.ಹೆಚ್.ಪಾಟೀಲ್ ಬಡಾವಣೆಯ ನಿವಾಸಿಗಳು, ತೆರಿಗೆ ಕಟ್ಟಿದರೂ ನಮ್ಮ ಬಡಾವಣೆ ನಿರ್ಲಕ್ಷ್ಯ ಮಾಡಿದ್ದೀರಿ. ಮೂಲಭೂತ ಸೌಲಭ್ಯಗಳನ್ನು ನೀಡುತ್ತಿಲ್ಲ. ದಶಕಗಳಿಂದ ಚರಂಡಿ ಕೊಳಚೆ ಮಿಶ್ರಿತ ನೀರು ಕುಡಿಸುತ್ತಿದ್ದೀರಿ. ನಮ್ಮ ಸಮಸ್ಯೆಗೆ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ.
ಆದರೆ ಕಮೀಷನರ್ ಜಾಧವ್ ಸೂಕ್ತ ಉತ್ತರ ನೀಡದೆ ಟೈಮ್ ಲಿಮಿಟ್ ನಿಮಗೆ ಬಿಟ್ಟಿದ್ದು, ತಿಂಗಳ ಒಳಗೆ ಕೆಲಸ ಮಾಡಿ ಕೊಡಿ ಎಂದರೆ ಆಗಲ್ಲ ಅಂತಿದ್ದಾರೆ. ಇದರಿಂದ ಬಡಾವಣೆ ನಿವಾಸಿಗಳು ಮತ್ತಷ್ಟು ಆಕ್ರೋಶಗೊಂಡರು.