ETV Bharat / state

ನಮ್ಮ ವರದಿಗೆ ಸ್ಪಂದನೆ: ತಾಳಿ ಅಡವಿಟ್ಟ ತಾಯಿಗೆ ಸಚಿವ ಸಿ. ಸಿ. ಪಾಟೀಲ್ ಸಹಾಯಹಸ್ತ - ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಮಾರಿದ ಮಹಿಳೆ

ಮಕ್ಕಳ ಬದುಕಿನಲ್ಲಿ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ತಿಳಿದ ತಾಯಿಯೊಬ್ಬಳು ತನ್ನ ತಾಳಿ ಅಡವಿಟ್ಟು ಮಕ್ಕಳ ಆನ್​ಲೈನ್​ ಶಿಕ್ಷಣಕ್ಕಾಗಿ ಟಿವಿ ತಂದಿದ್ದ ಬಗ್ಗೆ ಈಟಿವಿ ಭಾರತ ವರದಿ ವೀಕ್ಷಿಸಿದ ಸಿ.ಸಿ. ಪಾಟೀಲ್, ಆಪ್ತರ ಮೂಲಕ ಹಣ ನೀಡಿ ಅಡವಿಟ್ಟಿದ್ದ ತಾಳಿಯನ್ನು ಬಿಡಿಸಿಕೊಳ್ಳಲು ಸಹಾಯ ಮಾಡಿದ್ದಾರೆ.

poor-women-brought-tv-for-her-child
ತಾಳಿ ಅಡವಿಟ್ಟ ತಾಯಿ
author img

By

Published : Jul 31, 2020, 11:36 PM IST

ಗದಗ : ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟು, ಟಿವಿ ಕೊಡಿಸಿದ್ದ ಮಹಿಳೆಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ್ ಅವರು ತಮ್ಮ ಆಪ್ತರ ಮುಖಾಂತರ ಮಾಂಗಲ್ಯ ಸರವನ್ನು ಬಿಡಿಸಿಕೊಳ್ಳಲು ಇಪ್ಪತ್ತು ಸಾವಿರ ರೂ. ಧನಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ಈಟಿವಿ ಭಾರತ ಇಂಪ್ಯಾಕ್ಟ್.. ತಾಳಿ ಅಡವಿಟ್ಟ ತಾಯಿಗೆ ಸಹಾಯ ಹಸ್ತ

ಅಲ್ಲದೆ, ಅಧಿಕಾರಿ ವರ್ಗವೂ ಸಹ ನೆರವು ನೀಡಲು ಮುಂದಾಗಿದ್ದು, ಇಂದು ಸಂತ್ರಸ್ತ ಮಹಿಳೆ ಮನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳಾದ ರೂಪಾ ಉಪ್ಪಿನ ಹಾಗೂ ಪ್ರವೀಣ ಬೆಟಗೇರಿ ಭೇಟಿ ನೀಡಿ, ಪರಿಶೀಲಿಸಿ, ಮಾಹಿತಿ ಪಡೆದು ಮಕ್ಕಳ ರಕ್ಷಣಾ ಘಟಕ ಪ್ರಾಯೋಜಿಕತ್ವ ಯೋಜನೆ ಅಡಿ ನೆರವು ನೀಡುವುದಾಗಿ ಬರವಸೆ ನೀಡಿದ್ದಾರೆ.

ತಾಳಿ ಅಡವಿಟ್ಟ ತಾಯಿಗೆ ಸಚಿವ ಸಿ. ಸಿ. ಪಾಟೀಲ್ ಸಹಾಯಹಸ್ತ

ನಮ್ಮ ಅಂದಿನ ವರದಿ: ತಾಳಿ ಅಡವಿಟ್ಟು ಮಕ್ಕಳ ಆನ್​ಲೈನ್​​ ಶಿಕ್ಷಣಕ್ಕೆ ಟಿವಿ ಕೊಡಿಸಿದ ಮಹಾತಾಯಿ

ಇನ್ನು ದಲಿತ ಸಂಘಟನೆಗಳು, ಮತ್ತು ಕನ್ನಡಪರ ಸಂಘಟನೆಯವರು ನೆರವಿನ ಹಸ್ತ ಚಾಚುವುದಾಗಿ ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.