ETV Bharat / state

ಜಸ್ಟ್​ ಮಿಸ್​: ರೈಲಿನಡಿ ಸಿಲುಕಿದ ಮಹಿಳೆಯ ಪ್ರಾಣ ಉಳಿಸಿದ ಪೊಲೀಸ್ - Police save a passenger life in Gadag railway junction

ಚಲಿಸುತ್ತಿದ್ದ ರೈಲನ್ನು ಅವಸರದಲ್ಲಿ ಹತ್ತುವ ವೇಳೆ ಮಹಿಳೆಯೊಬ್ಬರು ಆಯಾ ತಪ್ಪಿ ರೈಲಿನಡಿ ಸಿಲುಕಿದ್ದು, ಕೂಡಲೇ ಸ್ಥಳದಲ್ಲಿದ್ದ ರೈಲ್ವೆ ಪೊಲೀಸ್​ ಸಿಬ್ಬಂದಿ ಅವರನ್ನು ರಕ್ಷಿಸಿ, ಮಾನವೀಯತೆ ಮೆರೆದಿದ್ದಾರೆ.

ರೈಲಿನಡಿ ಸಿಲುಕಿದ ಮಹಿಳೆಯ ರಕ್ಷಣೆ
ರೈಲಿನಡಿ ಸಿಲುಕಿದ ಮಹಿಳೆಯ ರಕ್ಷಣೆ
author img

By

Published : Jun 9, 2022, 12:35 PM IST

ಗದಗ​​​: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯಾ ತಪ್ಪಿ ರೈಲಿನಡಿ ಸಿಲುಕಿ ಪ್ರಾಣಾಪಾಯದಲ್ಲಿದ್ದ ಮಹಿಳೆಯೊಬ್ಬರನ್ನ ಸ್ಥಳದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡಿ ಸಮಯ ಪ್ರಜ್ಞೆ ಮೆರೆದಿರುವ ಘಟನೆ ಗದಗದ ರೈಲ್ವೆ ಜಂಕ್ಷನ್​ನಲ್ಲಿ ನಡೆದಿದೆ.

ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಅನ್ವರ್​ ಪಟೇಲ್ ಎಂಬುವರ ಪತ್ನಿ ಸೊಲ್ಲಾಪೂರ್​ ಗದಗ ರೈಲ್ವೆ ಮೂಲಕ ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿದ್ದರು. ತಡವಾಗಿ ಬಂದಿದ್ದ ಮಹಿಳೆ, ಇನ್ನೇನು ರೈಲು ಹೊರಟೇ ಬಿಟ್ಟಿತು ಎನ್ನುವಷ್ಟರಲ್ಲಿ ಓಡೋಡಿ ಹೋಗಿ ರೈಲು ಹತ್ತಲು ಪ್ರಯತ್ನ ಪಟ್ಟರು. ಮುಂದೆ ಮತ್ತೊಬ್ಬ ಮಹಿಳೆ ರೈಲು ಹತ್ತುವಷ್ಟರಲ್ಲಿ ಈ ಮಹಿಳೆ ಆಯಾ ತಪ್ಪಿ ರೈಲಿನಡಿ ಸಿಲುಕಿದ್ದಾರೆ. ಆದರೆ, ಅಲ್ಲಿಯೇ ಇದ್ದ ಅನ್ವರ್ ಎಂಬ ಪೊಲೀಸ್ ಸಿಬ್ಬಂದಿ ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ.

ರೈಲಿನಡಿ ಸಿಲುಕಿದ ಮಹಿಳೆಯ ರಕ್ಷಣೆ

ಮಹಿಳೆ ರಕ್ಷಣೆ ಮಾಡಿದ್ದಕ್ಕೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಅನ್ವರ್​ ಅವರ ಕಾರ್ಯ ಶ್ಲಾಘಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪೊಲೀಸ್​ ಸಿಬ್ಬಂದಿ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರೈಲ್ವೆ ಪೊಲೀಸ್​ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

ಇದನ್ನೂ ಓದಿ: ಮಗನ ಶವ ನೀಡಲು ₹50 ಸಾವಿರಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ.. ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿರುವ ದಂಪತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.