ETV Bharat / state

ಮುದ್ರಣ ಕಾಶಿಯಲ್ಲೂ ಕೊರೊನಾ ಶಾಕ್​​.... ಜನ ಸೇರದೆ ಕಳೆಗುಂದಿದ ಹೋಳಿ - ಗದಗ ಹೋಳಿ ಸುದ್ದಿ

ಹೋಳಿ ಹಬ್ಬಕ್ಕೂ ಕೊರೊನಾ ಬಿಸಿ​ ತಟ್ಟಿದೆ. ವೈರಸ್‌ ಭಯದಿಂದ ಗದಗ ಜನರು ಹೋಳಿ ಹಬ್ಬ ಆಚರಿಸಲು ಹಿಂದೇಟು ಹಾಕಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಿದ್ದ ಜನ ಈ ಬಾರಿ ಕಡಿಮೆ ಸಂಖ್ಯೆಯಲ್ಲಿ ಸೇರಿ ಹೋಳಿ ಆಚರಿಸಿದ್ದಾರೆ.

People of Gadag not celebrating Holi
ಕೊರೊನಾ ಕರಿನೆರಳಿನಲ್ಲಿ ಮುದ್ರಣಕಾಶಿ
author img

By

Published : Mar 13, 2020, 1:22 PM IST

ಗದಗ: ನಗರದಲ್ಲಿ ರಂಗ ಪಂಚಮಿ ದಿನದಂದು ರಂಗುರಂಗಿನ ಹೋಳಿ ಹಬ್ಬದ ಆಚರಣೆಗೂ ಕೊರೊನಾ ವೈರಸ್‌ ಬಿಸಿ ತಟ್ಟಿದೆ.

ಪೌರಾಣಿಕ ಹಿನ್ನೆಲೆಯುಳ್ಳ ರಂಗಪಂಚಮಿ ದಿನದಂದು ಕಾಮದಹನ ಮಾಡಿ ನಂತರ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದ್ರೆ ಈ ವರ್ಷ ಕೊರೊನಾ ವೈರಸ್‌ಗೆ ಭಯಭೀತರಾದ ಜನರು ಹೋಳಿ ಹಬ್ಬ ಆಚರಿಸಲು ಹಿಂದೇಟು ಹಾಕಿದ್ದಾರೆ.

ಕೊರೊನಾ ಭೀತಿಯಲ್ಲಿ ಮುದ್ರಣಕಾಶಿ

ನಗರದ ತೋಂಟದಾರ್ಯ ಮಠದ ಸ್ಟೇಷನ್‌ ರಸ್ತೆಯಲ್ಲಿ ಏರ್ಪಡಿಸುವ ಕಾರಂಜಿಯಲ್ಲೂ ಸಹ ಜನರ ಸಂಖ್ಯೆ ತುಂಬಾ ಕಡಿಮೆ ಇತ್ತು. ಬಣ್ಣದ ಕಾರಂಜಿ, ಡಿಜೆ ಸೌಂಡ್ ಹಾಗೂ ಬಗೆ ಬಗೆಯ ಬಣ್ಣ ಎರಚುವ ದೃಶ್ಯ ಮನಮೋಹಕವಾಗಿರುತಿತ್ತು. ಈ ವರ್ಷ ಕಾರಂಜಿಯಲ್ಲಿ ಬಣ್ಣದ ಬದಲು ಕೇವಲ ನೀರು ಸಿಂಪಡಣೆ ಮಾಡಿದ್ರೂ ಯುವ ಸಮೂಹ ಮಾತ್ರ ಬರಲಿಲ್ಲ. ಬಣ್ಣ ಆಡುವುದರಿಂದ ವೈರಸ್ ಬರಬಹುದು ಎಂಬ ಭಯದಿಂದ ಯುವಕರು ಹೋಳಿ ಆಚರಿಸಲು ಹಿಂದೇಟು ಹಾಕಿದಂತಿದೆ.

ಗದಗ-ಬೆಟಗೇರಿ ಅವಳಿ ನಗರದ ಅನೇಕ ಬೀದಿಗಳು ಭಣಗುಡುತ್ತಿವೆ. ಯುವಕ-ಯುವತಿಯರು ಹಾಗೂ ಮಕ್ಕಳು ಸಡಗರ-ಸಂಭ್ರಮದಿಂದ ಆಚರಿಸುವ ಹೋಳಿಗೆ ಈ ಬಾರಿ ಡೆಡ್ಲಿ ಕೊರೊನಾ ವೈರಸ್ ಶಾಕ್ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.