ಗದಗ: ಸರ್ಕಾರ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದು, 144 ಕಲಂ ಜಾರಿ ಇದ್ದರೂ ಜನ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಕೆಲವೆಡೆ ಮಾಂಸ ಖರೀದಿಗಾಗಿ ಜನರು ಮುಗಿ ಬಿದ್ದರು.
ನಗರದ ಗೌಳಿ ಗಲ್ಲಿಯ ಮಾಂಸ ಮಾರುಕಟ್ಟೆಯಲ್ಲಿ ಜನ ಜಂಗುಳಿ ಏರ್ಪಟ್ಟಿದೆ. ಭಾನುವಾರವಾಗಿದ್ದರಿಂದ ಜನರು ಮುಗಿಬಿದ್ದು ಮಾಂಸ ಖರೀದಿಗೆ ಮುಂದಾಗಿದ್ದಾರೆ. ಅಗತ್ಯ ವಸ್ತುಗಳ ಜೊತೆಗೆ ಮಾಂಸ ಮಾರಾಟಕ್ಕೂ ಜಿಲ್ಲಾಡಳಿತ ಅನುಮತಿ ನೀಡಿದೆ. ಇನ್ನು ಅನಾವಶ್ಯಕವಾಗಿ ಓಡಾಡೋರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳಿಸ್ತಿರೋ ದೃಶ್ಯಗಳು ಕಂಡುಬರ್ತಿವೆ. ಮೆಡಿಕಲ್, ತರಕಾರಿ ದಿನಸಿ ಹೊರತುಪಡಿಸಿ ಎಲ್ಲವೂ ಬಂದ್ ಆಗಿವೆ.
ಇನ್ನು ನಗರದ ಎಪಿಎಂಸಿ ಆವರಣ ಹಾಗೂ ವಿ.ಡಿ.ಎಸ್.ಟಿ ಮೈದಾನದಲ್ಲಿ ಮಹಿಳೆಯರು, ಮಕ್ಕಳು, ವೃದ್ದರು, ಯುವಕರು ಜಮಾವಣೆಯಾಗಿದ್ದಾರೆ. ಜೊತೆಗೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ ಸಂಚಾರ ಮಾಡುತ್ತಿದ್ದಾರೆ.