ಗದಗ : ಜಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಕೆಲಹೊತ್ತಿನಿಂದ ನರಳಾಡುತ್ತಿದ್ದ ರೋಗಿಯೋರ್ವ ನೆಲದ ಮೇಲೆ ಬಿದ್ದು ಒದ್ದಾಡಿದ್ದಾನೆ.
ನಗರದ ಹೊರವಲಯದಲ್ಲಿ ಇರುವ ಜಿಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ತುರ್ತು ಚಿಕಿತ್ಸಾ ಘಟಕದ ವಾರ್ಡ್ನಲ್ಲಿ ಬೇಧಿಯಿಂದ ನರಳಾಡುತ್ತಿರುವ ರೋಗಿ, ನೋವು ತಾಳಲಾರದೇ ನೆಲಕ್ಕೆ ಬಿದ್ದು ಒದ್ದಾಡುವ ದೃಶ್ಯ ದೊರೆತಿದೆ. ರೋಗಿಗೆ ವೈದ್ಯರು ಚಿಕಿತ್ಸೆ ನೀಡಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಆದರೆ ರೋಗಿಯ ನರಳಾಟ ನೋಡಿ ವಾರ್ಡ್ಗೆ ಬಂದ ಆಸ್ಪತ್ರೆ ಸಿಬ್ಬಂದಿ ಆತನನ್ನು ಮಂಚದ ಮೇಲೆ ಸರಿಯಾಗಿ ಮಲಗಿಸಿ ತೆರಳಿದ್ದಾರೆ.