ETV Bharat / state

ಸೋಂಕಿತರ ಕುಟುಂಬಕ್ಕೆ ಬುದ್ಧಿ ಹೇಳಿದ್ದೇ ತಪ್ಪಾಯ್ತು!: ವಾಹನಗಳಿಗೆ ಕೊಳ್ಳಿ ಇಟ್ಟರು

ನಿಮ್ಮ ಮನೆಯ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ನೀವೂ ಕೂಡಾ ಪರೀಕ್ಷೆ ಮಾಡಿಸಿಕೊಳ್ಳಿ, ಪದೇ ಪದೆ ನೀವ್ಯಾರೂ ಮನೆಯಿಂದ ಹೊರಗಡೆ ಬರಬೇಡಿ ಎಂದು ತಿಳಿ ಹೇಳಿದ್ದಕ್ಕೆ ಆಕ್ರೋಶಗೊಂಡು ಬುದ್ಧಿ ಹೇಳಿದವರಿಗೆ ಚೆನ್ನಾಗಿ ಥಳಿಸಿ ಅವರ ಮನೆಯಲ್ಲಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

shirahatti
shirahatti
author img

By

Published : Jul 27, 2020, 8:02 AM IST

ಗದಗ: ನಿಮ್ಮ ಮನೆಯ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ನೀವೂ ಕೂಡ ಹೋಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಹೇಳಿದ್ದಷ್ಟೆ... ಇದರಿಂದ ಆಕ್ರೋಶಗೊಂಡು ಬುದ್ಧಿ ಹೇಳಿದವರಿಗೆ ಚೆನ್ನಾಗಿ ಥಳಿಸಿ ಅವರ ಮನೆಯಲ್ಲಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಈ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ‌ನಾದಿಗಟ್ಟಿ ಗ್ರಾಮದಲ್ಲಿ ನಡೆದಿದೆ. ಹನುಮಂತಪ್ಪ ವಡ್ಡರ ಮತ್ತು ಸಂಬಂಧಿಕರು ಸೇರಿ ಕೊರೊನಾ ಪಾಸಿಟಿವ್ ಬಂದಿದ್ದವರ ಸಂಬಂಧಿ ಗುರಪ್ಪ ಲಕ್ಷ್ಮಪ್ಪ ವಡ್ಡರ ಮತ್ತು ಇವರ ಮನೆಯವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಅಂತ ತಿಳಿ ಹೇಳಿದ್ದರು.

ಜೊತೆಗೆ ಪದೇ ಪದೆ ನೀವ್ಯಾರೂ ಹೊರಗಡೆ ಬರಬೇಡಿ. ಊರಿನವರಿಗೆ ತೊಂದರೆ ಕೊಡಬೇಡಿ ಅಂತ ಸೂಚಿಸಿದ್ದರಂತೆ. ಈ ಸಂಬಂಧ ಶಿರಹಟ್ಟಿ ತಹಶೀಲ್ದಾರರಿಗೂ ದೂರು ಕೊಟ್ಟು ಬಂದಿದ್ದರು. ಆದರೆ, ಇವರ ಮಾತಿಗೆ ಕಿವಿ ಕೊಡದೇ ಬೇಕಾಬಿಟ್ಟಿಯಾಗಿ ಓಡಾಡಿದ್ದಾರೆ.

ಇದನ್ನು ಪ್ರಶ್ನಿಸಿದ ಹನುಮಂತಪ್ಪ ವಡ್ಡರ ಮತ್ತು ಈತನ ಕುಟುಂಬದವರ ಮೇಲೆ ಗುರುಪ್ಪ ವಡ್ಡರ ಮತ್ತು ಸಂಬಂಧಿಕರು ಸೇರಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಮತ್ತು ಬೈಕ್​ಗೆ ಬೆಂಕಿ ಹಚ್ಚಿದ್ದಾರೆ. ಬೈಕ್​ನಲ್ಲಿದ್ದ ಕೆಲವು ದಾಖಲೆ ಪತ್ರ ಬೆಂಕಿಗೆ ಆಹುತಿಯಾಗಿವೆ.

fir copy
ಎಫ್​ಐಆರ್ ಪ್ರತಿ
fir copy
ಎಫ್​ಐಆರ್ ಪ್ರತಿ
fir copy
ಎಫ್​ಐಆರ್ ಪ್ರತಿ
fir copy
ಎಫ್​ಐಆರ್ ಪ್ರತಿ

ಗುರುಪ್ಪ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಬಂದಿತ್ತು. ಅವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ನಿಮಗೂ ಬರಬಹುದು, ನೀವು ಪರೀಕ್ಷೆ ಮಾಡಿಸಿಕೊಳ್ಳಿ, ಮನೆಯಿಂದ ಹೊರಗೆ ಬರಬೇಡಿ ಅಂದಿದ್ದಕ್ಕೆ ಆಕ್ರೋಶಗೊಂಡು ಈ ರೀತಿ ಹಲ್ಲೆ ಮಾಡಿರೋದಾಗಿ ದೂರು ದಾಖಲಾಗಿದೆ. ಈ ಹಿಂದೆ ಹನುಮಂತಪ್ಪ ವಡ್ಡರ ಹಲವು ಬಾರಿ ಬುದ್ದಿವಾದ ಹೇಳಿದರೂ ಗುರಪ್ಪ ಲಕ್ಷ್ಮಪ್ಪ ವಡ್ಡರ ಕೇಳಿರಲಿಲ್ಲ. ನೀವೇ ಊರು ಬಿಟ್ಟು ಹೋಗಿ ಎಂದು ಬೆದರಿಸಿದ್ದ.

ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ‌ ವಿಚಾರಣೆ ನಡೆಸುತ್ತಿದ್ದಾಗಲೇ ಈ ಘಟನೆ ನಡೆದಿದೆ. ಈ ಸಂಬಂಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 20 ಜನರ ಮೇಲೆ ಐಪಿಸಿ 1860 (U/s-506,504, 149, 436, 147, 143, 323,326,354)0050/2020ರ ಅಡಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.