ಗದಗ: ಲಾಕ್ಡೌನ್ ಹಿನ್ನೆಲೆ ನಿಲ್ಲಿಸಲಾಗಿದ್ದ ಬಸ್ ಸಂಚಾರದಿಂದ ಜನ ಪರದಾಡುತ್ತಿದ್ದು, ಜನರಿಗೆ ತೊಂದರೆಯಾಗಬಾರದೆಂದು ಸರ್ಕಾರ ಬಸ್ ಸಂಚಾರ ಆರಂಭಿಸಿದೆ. ಆದ್ರೆ ಜನ ಬಸ್ನಲ್ಲಿ ಪ್ರಯಾಣ ಮಾಡಲು ಭಯ ಪಡ್ತಿದ್ದಾರೆ ಅನ್ನೋ ಅನುಮಾನ ಶುರುವಾಗಿದೆ.
ಹೌದು, ಬಸ್ ಸಂಚಾರ ಆರಂಭವಾಗಿ ಮೂರು ದಿನವಾದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿಲ್ಲ. ಇಂದು ಸಹ ಗದಗ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಕುರ್ಚಿಗಳು ಕಾಣಿಸಿದವು. ಬಸ್ ಚಾಲಕರು, ನಿರ್ವಾಹಕರು ಪ್ರಯಾಣಿಕರಿಗಾಗಿ ಕಾಯೋ ಪರಿಸ್ಥಿತಿ ಸೃಷ್ಟಿಯಾಗಿದೆ. ಇಲ್ಲಿ ಬಹುತೇಕ ಪ್ರಯಾಣಿಕರು ನೌಕರರು, ಉದ್ಯೋಗಿಗಳೇ ಆಗಿದ್ದಾರೆ. ಆದ್ರೆ ಸಂಬಂಧಿಕರ ಊರಿಗೆ ಮತ್ತು ಇತರೆ ವ್ಯವಹಾರಗಳಿಗೆ ತೆರಳುವವರು ವಿರಳವಾಗಿದ್ದಾರೆ. ಹಾಗಾಗಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಕೊರೊನಾ ಭಯ ಅವರಿಗೆ ಕಾಡ್ತಿರಬಹುದು ಎಂದು ಬಸ್ ಸಿಬ್ಬಂದಿ ಹೇಳ್ತಿದ್ದಾರೆ.