ಗದಗ : ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯನವರು ರಾಜಕೀಯ ಕಾರಣಕ್ಕೆ ಮಾಡಿದ್ದಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಯನ್ನು ಗದಗನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ವಿಚಿತ್ರ ವ್ಯಕ್ತಿ. ತಮ್ಮ ಸ್ವಾರ್ಥಕ್ಕಾಗಿ ಏನೇನೋ ಹೇಳುತ್ತಾರೆ. ಟಿಪ್ಪು ಜಯಂತಿ ರಾಜಕೀಯ ಕಾರಣಕ್ಕಾಗಿ ಜಾರಿಗೆ ತಂದರು. ಮುಸ್ಲಿಂ ಮತಬ್ಯಾಂಕ್ಗಾಗಿ ಕಾಂಗ್ರೆಸ್ ಏನ್ ಬೇಕಾದರೂ ಮಾಡುತ್ತದೆ. ಇಬ್ರಾಹಿಂ ಹೇಳಿರೋದು ಹೊಸದೇನಲ್ಲ ಎಂದರು.
ಮುಸ್ಲಿಂರಲ್ಲಿ ದರ್ಗಾ, ಸಮಾಧಿ ಪೂಜೆ ಮಾಡುವಂತ ಪದ್ಧತಿ ಇಲ್ಲ. ಟಿಪ್ಪು ಸುಲ್ತಾನ್ ಮೂರ್ತಿಗೆ ಮಾಲೆ ಹಾಕಿ ಜೈಕಾರ ಕೂಗೋ ಪದ್ಧತಿಯೂ ಇಲ್ಲ. ಮಹಮ್ಮದ್ ಪೈಗಂಬರ್ ಅಲ್ಲಾಹುನ ಬಿಟ್ಟರೆ ಬೇರೆ ದೇವರನ್ನು ನಂಬೋದಿಲ್ಲ. ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ಪ್ರಾರಂಭ ಮಾಡಿದ್ದು ಎಂದು ಕಿಡಿಕಾರಿದರು.
ತಾಲಿಬಾನ್ಗೆ ಆರ್ಎಸ್ಎಸ್ ಹೋಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಕೆ ಮಾಡೋದು ಮೂರ್ಖತನ. ತಾಲಿಬಾನ್ನಲ್ಲಿ ಹಿಂಸೆಯೇ ಪ್ರಧಾನ ಆದ್ಯತೆ ಇದೆ. ಆದರೆ, ಆರ್ಎಸ್ಎಸ್ 96 ವರ್ಷ ನಿರಂತರವಾಗಿ ಯಾವುದೇ ಅಪರಾಧ ಕೃತ್ಯಗಳಿಲ್ಲದೆ ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ಹೋಲಿಕೆ ಮಾಡೋದು ಮೂರ್ಖತನ. ಮುಸ್ಲಿಂ ಮತಕ್ಕಾಗಿ ಕುಮಾರಸ್ವಾಮಿ, ಸಿದ್ದರಾಮಯ್ಯ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಪಕ್ಷ, ನಾಯಕರ ವಿರುದ್ಧ ಇಬ್ರಾಹಿಂ ಮಾತನಾಡಿದ್ರೂ ಕಾಂಗ್ರೆಸ್ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ ಗೊತ್ತಾ?