ETV Bharat / state

ಇಟಗಿ ದೇವಸ್ಥಾನದ ಮುಂದಿರುವ ಕಲ್ಲಿನಲ್ಲಿ ಹೊರಹೊಮ್ಮುತ್ತಿದೆ ಸಂಗೀತ: ವಿಡಿಯೋ ವೈರಲ್​​ - ಇಟಗಿ ದೇವಸ್ಥಾನ

ಇಟಗಿ ಪಟ್ಟಣದ ದೇವಸ್ಥಾನದ ಮುಂದಿರುವ ಕಲ್ಲುಗಳಲ್ಲಿ ಸಂಗೀತ (Music coming from stones) ಕೇಳಿ ಬರುತ್ತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​​ ಆಗಿದೆ.

music in stone in front of Itagi temple
ಇಟಗಿ ದೇವಸ್ಥಾನದ ಮುಂದಿರುವ ಕಲ್ಲು
author img

By

Published : Nov 10, 2021, 5:24 PM IST

ಗದಗ: ಜಿಲ್ಲೆಯ ರೋಣ ತಾಲೂಕಿನ ಇಟಗಿ (Itagi) ಗ್ರಾಮದ ದೇವಸ್ಥಾನದ ಮುಂದೆ ಬಿದ್ದಿರುವ ಕಲ್ಲಿನ ತುಂಡೊಂದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಪ್ರವಾಸಿಗರು ಸಂಗೀತ ಕೇಳಲು, ಸಂಗೀತ ಉಂಟು ಮಾಡಲು ಕಲ್ಲನ್ನು ಕುಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

'ಲಿಥೋಫೋನಿಕ್ ಬಂಡೆ'ಗಳು (Lithophonin Rocks) ಎಂದು ಕರೆಯಲ್ಪಡುವ ಇದೇ ರೀತಿಯ ಕಲ್ಲುಗಳನ್ನು ಹಂಪಿಯ ಪ್ರಸಿದ್ಧ ಸಂಗೀತ ಸ್ತಂಭಗಳಲ್ಲಿ ಬಳಸಲಾಗಿದೆ. ಮುಳಗುಂದ ಪಟ್ಟಣದ ಸಮೀಪವಿರುವ ನೀಲಗುಂದ ಬೆಟ್ಟ, ಇಟಗಿ ಬಳಿಯ ಬಸವೇಶ್ವರ ದೇವಸ್ಥಾನ, ರೋಣ ತಾಲೂಕಿನ ಮುಗಳಿ ಮತ್ತು ಇಟಗಿಯ ಭೀಮಾಂಬಿಕಾ ದೇವಸ್ಥಾನದಲ್ಲಿಯೂ ಇಂತಹ ಕಲ್ಲುಗಳು ಕಂಡುಬರುತ್ತವೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸುತ್ತಮುತ್ತಲಿನ ಜನರು ಕಲ್ಲಿನಿಂದ ಹೊರಹೊಮ್ಮುವ ಸಂಗೀತದ ಸ್ವರಗಳನ್ನು ಪರಿಶೀಲಿಸಲು ಇಟಗಿ ಗ್ರಾಮದ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಗ್ರಾಮದ ಹಿರಿಯರು 'ಗಂಗಲಗಲ್ಲು' ಎನ್ನುತ್ತಾರೆ. ಗಂಗಲ್ ಎಂದರೆ ಊಟಕ್ಕೆ ಬಳಸುವ ಸ್ಟೀಲ್ ಅಥವಾ ಲೋಹದ ತಟ್ಟೆ ಎಂದರ್ಥ. ಒಂದು ಕಲ್ಲನ್ನು ಹೊಡೆದಾಗ ಅದು ಲೋಹದ ತಟ್ಟೆಗೆ ಹೊಡೆದಂತೆ ಧ್ವನಿಸುತ್ತದೆ.

ಸಂಗೀತದ ಬಂಡೆಗಳನ್ನು ಬಹಳ ಹಿಂದಿನಿಂದಲೂ ನೋಡಿದ್ದೇವೆ. ಕಳೆದ 80-90 ವರ್ಷಗಳಿಂದ ಈ ಬಂಡೆಗಳು ಇಲ್ಲಿ ಬಿದ್ದಿವೆ ಎಂದು ಕೆಲವು ಹಿರಿಯರು ಹೇಳಿದ್ದಾರೆ. ಕೆಲವು ಶಿಲ್ಪಿಗಳು ಬಸವಣ್ಣನ ಮೂರ್ತಿಯನ್ನು ಮಾಡಲು ಅವುಗಳನ್ನು ಇಲ್ಲಿಗೆ ತಂದಿದ್ದರು, ಆದರೆ ಅವು ಸಂಗೀತ ಶಿಲೆಗಳು ಎಂದು ತಿಳಿದ ನಂತರ ಅವರು ನಿಲ್ಲಿಸಿದರು ಎಂದು ಗ್ರಾಮದ ಕೆಲವು ಹಿರಿಯರು ಹೇಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.