ETV Bharat / state

9 ತಿಂಗಳ ಮಗುವಿನ ಸಾವು ಸಹಜವಲ್ಲ ಕೊಲೆ: ಅತ್ತೆ ವಿರುದ್ಧ ಮಗುವಿನ ತಾಯಿ ದೂರು - ಗಜೇಂದ್ರಗಡ ಠಾಣೆ

ನನ್ನ ಮಗುವನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ತಾಯಿಯೊಬ್ಬರು, ತನ್ನ ಅತ್ತೆ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

body was sent for postmortem.
ಮಗುವಿನ ಶವ ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು.
author img

By ETV Bharat Karnataka Team

Published : Nov 25, 2023, 3:40 PM IST

Updated : Nov 25, 2023, 5:52 PM IST

ಗದಗ: ತನ್ನ 9 ತಿಂಗಳ ಹಸುಗೂಸನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮಗುವಿನ ತಾಯಿಯೊಬ್ಬರು ಅತ್ತೆ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಗು ನ.22 ರಂದು ಮೃತಪಟ್ಟಿದ್ದು, ಅಂದು ತಮ್ಮದೇ ಜಮೀನಿನಲ್ಲಿ ಮಗುವಿನ ಅಂತ್ಯಸಂಸ್ಕಾರ ಕೂಡ ಮಾಡಲಾಗಿದೆ. ನಂತರ ಅಜ್ಜಿಯಿಂದ ತನ್ನ 9 ತಿಂಗಳ ಹಸುಗೂಸು ಕೊಲೆ ಆಗಿದೆ ಎಂದು ಆರೋಪಿಸಿ ಮಗುವಿನ ತಾಯಿ ನಾಗರತ್ನ ಎಂಬುವವರು ಗಜೇಂದ್ರಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಗುವಿನ ಶವ ಮರಣೋತ್ತರ ಪರೀಕ್ಷೆಗೆ: ಅತ್ತೆ ಸರೋಜಾ ವಿರುದ್ಧ ದೂರು ದಾಖಲು ಮಾಡುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಗದಗ ಎಸಿ ವೆಂಕಟೇಶ‌ ನಾಯಕ್, ಸಿಪಿಐ ಎಸ್ ಎಸ್ ಬೀಳಗಿ ನೇತೃತ್ವದಲ್ಲಿ‌ ಹೂಳಲಾಗಿದ್ದ ಮಗುವಿನ ಶವ ಹೊರತೆಗೆದು ಗುರುವಾರ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.

ಹೆರಿಗೆ ಆದ ಐದು ತಿಂಗಳ ಬಳಿಕ ಮಗುವಿನೊಂದಿಗೆ ಗಂಡನ ಮನೆಗೆ ಬಂದಿದ್ದೆ. ಮನೆಗೆ ಬಂದಾಗ ಅತ್ತೆ ಸರೋಜಾ ಇಷ್ಟು ಬೇಗ ಮಗು ಬೇಕಿತ್ತಾ ಅಂತ ಸಿಟ್ಟಿನಿಂದ ಪ್ರಶ್ನೆ ಮಾಡಿದ್ದರು. ಹೀಗಾಗಿ ಮಗುವಿಗೆ ಅಡಕೆ ಹೋಳು, ಎಲೆ ತುಂಬು ತಿನ್ನಿಸಿ ಉಸಿರುಗಟ್ಟಿಸಿ‌ ಮಗುವನ್ನು ಕೊಲ್ಲಲಾಗಿದೆ ಎಂದು ಮಗುವಿನ ತಾಯಿ ನಾಗರತ್ನ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

9 ತಿಂಗಳ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹಿನ್ನೆಲೆ ಗಜೇಂದ್ರಗಡ ಠಾಣೆಯ ಪೊಲೀಸರು ದೂರಿನನ್ವಯ ತನಿಖೆ ಆರಂಭಿಸಿದ್ದಾರೆ.

ಇದನ್ನೂಓದಿ:ಧಾರವಾಡ: ಆಟ ಆಡುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಕಾಪಾಡಲು ಹೋದ ಗೆಳೆಯನಿಗೆ ಗಾಯ

Last Updated : Nov 25, 2023, 5:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.