ಗದಗ: 'ರೈತರೊಂದಿಗೆ ಒಂದು ದಿನ' ಕಾರ್ಯಕ್ರಮದ ವೇಳೆ ಕೃಷಿ ಸಚಿವರ ಫೋಟೋ ಶೂಟ್ ಜೋರಾಗಿತ್ತು.
ಗದಗ ಜಿಲ್ಲೆ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಕೃಷಿ ಸಚಿವರ ಕಾರ್ಯಕ್ರಮವಿತ್ತು. ಕಾರ್ಯಕ್ರಮದ ಉದ್ದಕ್ಕೂ ಬೆಂಗಳೂರಿಂದ ಬಂದಿದ್ದ 10 ಜನ ಫೋಟೋಗ್ರಾಫರ್ಗಳ ತಂಡ ಸಚಿವ ಬಿ.ಸಿ.ಪಾಟೀಲ ಅವರ ಫೋಟೋ ಶೂಟ್ ನಡೆಸಿದರು. ಹೋಗೋ ದಾರಿಯಲ್ಲಿ, ಹೊಲ ಗದ್ದೆಗಳಲ್ಲಿ ಸಚಿವರನ್ನು ನಿಲ್ಲಿಸಿ ಡ್ರೋನ್, ಗಿಂಬಲ್, DSLR ಕ್ಯಾಮರಾ ಬಳಿಸಿ ಫೋಟೋ ಶೂಟ್ ನಡೆಸಿದರು.
ಇದನ್ನೂ ಓದಿ: ಕೊಡಗು ಟಿಪ್ಪು ಜಯಂತಿ ಗಲಭೆಗೆ ನಾಳೆಗೆ 6 ವರ್ಷ: ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್