ETV Bharat / state

ರಾಜ್ಯದಲ್ಲಿ ಕಾಂಗ್ರೆಸ್​ ಶಾಂತಿ ಕದಡುತ್ತಿದೆ... ಸಚಿವ ಸಿ.ಸಿ. ಪಾಟೀಲ್ ಕಿಡಿ

ಡಿ. ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಕಿಡಿ ಕಾರಿದ್ರು.

Minister C.C. Patil
ಸಚಿವ ಸಿ.ಸಿ. ಪಾಟೀಲ್
author img

By

Published : Jan 13, 2020, 6:45 PM IST

ಗದಗ : ಡಿ. ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಕಿಡಿ ಕಾರಿದ್ರು.

ಕನಕಪುರದ ಏಸು ಪ್ರತಿಮೆ ವಿಚಾರವಾಗಿ ಮಾತನಾಡಿದ ಅವರು, ಕ್ರಿಶ್ಚಿಯನ್ ಸಮುದಾಯ ಏಸು ಪ್ರತಿಮೆ ಮಾಡುತ್ತಿಲ್ಲ. ಪ್ರತಿಮೆ ನಿರ್ಮಾಣ ಮಾಡಲು ಡಿ. ಕೆ. ಶಿವಕುಮಾರ್ ಅವರೇ ಮುಂದಾಗಿದ್ದಾರೆ. ಪ್ರತಿಮೆ ವಿಷಯ ತಿರುಗಿ ಅವರಿಗೆ ಪೆಟ್ಟು ಕೊಡುತ್ತದೆ ವಿನಃ ಯಾವುದೇ ಲಾಭವಾಗುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಐದು ವರ್ಷ ಆಡಳಿತ ನಡೆಸಿದಾಗ, ಡಿ. ಕೆ. ಶಿವಕುಮಾರ್ ಅನಭಿಷಕ್ತ ದೊರೆಯಂತೆ ಇದ್ದರು. ಬಳಿಕ ದೋಸ್ತಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಅವರ ಎಡಗೈ ಹಾಗೂ ಬಲಗೈ ಬಂಟನಂತೆ ಇದ್ದರು. ಆ ಸಮಯದಲ್ಲಿ ಇಲ್ಲದ ವಿಚಾರವನ್ನು ಈಗೇಕೆ ಎತ್ತಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ್ರು. ಒಟ್ಟಾರೆ ಇದು ಕಾನೂನು ಸುವ್ಯವಸ್ಥೆ ಹಾಗೂ ನಮ್ಮ ಸರ್ಕಾರವನ್ನು ಒತ್ತಡದಲ್ಲಿ ಸಿಲುಕಿಸುವ ಪ್ರಯತ್ನವಾಗಿಗೆ ಎಂದರು. ಬಿಜೆಪಿಯವರು ಎಲ್ಲಾ ಜಾತಿ ಸಮುದಾಯದೊಂದಿಗೆ ಸಾಮರಸ್ಯದ ಭಾವನೆಯಿಂದ ಹೋಗುತ್ತಿದ್ದಾರೆ. ಯಾವುದೇ ಕೋಮಿನ ವಿರೋಧಿ ಬಿಜೆಪಿ ಪಕ್ಷವಲ್ಲ ಎಂದು ಹೇಳಿದರು.

ಸಚಿವ ಸಿ.ಸಿ. ಪಾಟೀಲ್

ಇನ್ನು ಕುಮಾರಸ್ವಾಮಿ ಸಿಡಿ ಬಿಡುಗಡೆಗೊಳಿಸಿದ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಅವರು ಸಿಡಿ ಮೊದಲಿನಿಂದ ಮಾಡಿಕೊಂಡು ಬಂದಿದ್ದಾರೆ. ಜನಾರ್ದನರೆಡ್ಡಿಯವರದೂ ಒಂದು ಸಿಡಿ ಬಿಡುಗಡೆ ಮಾಡಿದ್ರು. ಹಾಗೆ ಇದೀಗ ಒಂದು ಸಿಡಿ ಬಿಡುಗಡೆ ಮಾಡಿದ್ದಾರೆ. ಜನರನ್ನು ದ್ವಂದದಲ್ಲಿ ಇಡುವ ಪ್ರಯತ್ನ ಅವರದು ಅಂದರು.

ಇನ್ನು ಬಳ್ಳಾರಿಗೆ ಜಮೀರ್ ಅಹ್ಮದ್ ಎಂಟ್ರಿ ಕೊಟ್ಟಿರುವ ವಿಚಾರವಾಗಿ ಮಾತನಾಡಿ, ಮತದಾರ ನಮ್ಮ ಕೈಯಲ್ಲಿರುವ ಕಲ್ಲಲ್ಲ. ಜನ ಯಾವ ಸಮಯದಲ್ಲಿ ಯಾರನ್ನು ನಾಯಕರನ್ನಾಗಿ ಮಾಡ್ತಾರೆ ಅವರು ನಾಯಕರು ಆಗುತ್ತಾರೆ. ಪ್ರಧಾನಿ ಮೋದಿ ನಾಯಕತ್ವವನ್ನು ಭಾರತ‌ ಸೇರಿದಂತೆ ಇಡೀ ವಿಶ್ವವೇ ಒಪ್ಪಿಕೊಂಡಿದೆ. ಇಂತಹ ನೂರು ಜಮೀರ್​ಗಳು ಬಂದರೂ ಇನ್ನೂ 10 ವರ್ಷ ಮೋದಿಯವರನ್ನು ಅಲುಗಾಡಿಸಲು ಆಗಲ್ಲ ಎಂದರು.‌

ಜಮೀರ್ ಅಹ್ಮದ್ ಇನ್ನೊಮ್ಮೆ ಅಂತಹ ಹೇಳಿಕೆ ನೀಡಿದ್ರೆ ಬಹುಶಃ ಅವರು ಹೇಳಿದ ಹಾಗೇ ಸೆಕ್ಯೂರಿಟಿ ಡ್ರೆಸ್ ಹಾಕಿಕೊಳ್ಳುವುದು ಖಾಯಂ ಆಗುತ್ತೆ ಎಂದು ತಿರುಗೇಟು ನೀಡಿದ್ರು.

Intro:ಏಸು ಪ್ರತಿಮೆ ನಿರ್ಮಾಣ ವಿಚಾರ....ಗದಗನಲ್ಲಿ ಡಿಕೆ ವಿರುದ್ಧ ಸಚಿವ ಸಿ ಸಿ ಪಾಟೀಲ್ ಕಿಡಿ....ಡಿಕೆಶಿ ಹಾಗೂ ಕಾಂಗ್ರೆಸ್ ರಾಜ್ಯದ ಶಾಂತಿ ಕದಡುವ ಕೆಲಸ ಮಾಡ್ತಿದ್ದಾರೆ....ಅನಭಿಷಕ್ತ ದೊರೆಯಂತೆ ಡಿಸಿಶಿ ಇದ್ರು.

ಆಂಕರ್-ತೀವ್ರ ಚರ್ಚೆಗೆ ಗ್ರಾಸವಾಗಿರೋ ಕನಕಪುರದ ಏಸು ಪ್ರತಿಮೆ ವಿಚಾರವಾಗಿ ಗದಗನಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಕಿಡಿ ಕಾರಿದ್ದಾರೆ.‌ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಐದು ವರ್ಷ ಆಡಳಿತ ನಡೆಸಿದಾಗ ಡಿ ಕೆ ಶಿವಕುಮಾರ್ ಅನಭಿಷಕ್ತ ದೊರೆಯಂತಿದ್ರು.14 ತಿಂಗಳಲ್ಲಿ ಕುಮಾರಸ್ವಾಮಿ ಅವರ ಎಡಗೈ ಹಾಗೂ ಬಲಗೈ ಬಂಟನಾಗಿದ್ದರು. ಆಗ ಇಲ್ಲದ ವಿಚಾರ ಈಗೇಕೆ ಎತ್ತಿಕೊಂಡಿದ್ದಾರೆ ಅಂತಾ ಪಾಟೀಲ್ ಪ್ರಶ್ನಿಸಿದ್ರು. ಒಟ್ಟಾರೆ ಕಾನೂನು ಸುವ್ಯವಸ್ಥೆ ಹಾಗೂ ನಮ್ಮ ಸರ್ಕಾರವನ್ನು ಒತ್ತಡದಲ್ಲಿ ಸಿಲುಕಿಸುವ ಪ್ರಯತ್ನ ಇದಾಗಿದೆ. ಪ್ರತಿಮೆ ವಿಷಯ ತಿರುಗಿ ಅವರಿಗೇನೆ ಪೆಟ್ಟು ಕೊಡುತ್ತದೆ ವಿನಃ ಯಾವುದೇ ಲಾಭವಾಗುವುದಿಲ್ಲ. ಮೇಲಾಗಿ ಕ್ರಿಶ್ಚಿಯನ್ ಸಮುದಾಯದವರು ಏಸು ಪ್ರತಿಮೆ ಮಾಡುತ್ತಿಲ್ಲ. ಪ್ರತಿಮೆ ನಿರ್ಮಾಣ ಮಾಡಲು ಡಿ ಕೆ ಶಿವಕುಮಾರ್ ಅವರೇ ಮುಂದಾಗಿದ್ದಾರೆ ಅಂತಾ‌ ಟಾಂಗ್ ನೀಡಿದ್ರು. ಬಿಜೆಪಿಯವರು ಎಲ್ಲಾ ಜಾತಿ ಸಮುದಾಯದೊಂದಿಗೆ ಸಾಮರಸ್ಯದ ಭಾವನೆಯಿಂದ ಹೋಗುತ್ತಿದ್ದಾರೆ. ಯಾವುದೇ ಕೋಮಿನ ವಿರೋಧಿ ಬಿಜೆಪಿ ಪಕ್ಷವಲ್ಲ ಅಂತಾ ತಿಳಿಸಿದ್ರು. ಇನ್ನು ಬಳ್ಳಾರಿಗೆ ಇಂದು ಜಮೀರ ಅಹ್ಮದ್ ಎಂಟ್ರಿ ಕೊಟ್ಟಿರೋ ವಿಚಾರವಾಗಿ ಪ್ರಯಿಕ್ರಿಯಿಸಿದ ಸಿ ಸಿ ಪಾಟೀಲ ತೀರಾ ಕೆಳಮಟ್ಟದ ಚರ್ಚೆಗೆ ಬಿಜೆಪಿ ಪಕ್ಷ ಇಳಿಯುವುದಿಲ್ಲ. ಜಮೀರ್ ಅಹ್ಮದ್ ಈ ಹಿಂದೆ ಹೇಳಿದ ಹಾಗೇ ಅವರು ಸೋತರೆ ನಾ ಪಿವನ್ ಆಗ್ತೀನಿ, ಕಸ ಗುಡಿಸುವವನು ಆಗ್ತೇನೆ ಅನ್ನೊದಕ್ಕೆ ಮತದಾರ ನಮ್ಮ ಕೈಯಲ್ಲಿರುವ ಕಲ್ಲು ಅಲ್ಲಾ. ಜನ ಯಾವ ಸಮಯದಲ್ಲಿ ಯಾರನ್ನು ನಾಯಕರನ್ನಾಗಿ ಮಾಡ್ತಾರೆ ಅವರು ನಾಯಕರು ಆಗುತ್ತಾರೆ.
ಪ್ರಧಾನಿ ಮೋದಿ ನಾಯಕತ್ವವನ್ನು ಭಾರತ‌ ಸೇರಿದಂತೆ ಇಡೀ ವಿಶ್ವವೇ ಒಪ್ಪಿಕೊಂಡಿದೆ. ಇಂತಹ ನೂರು ಜಮೀರ್ ಗಳು ಬಂದರೂ ಇನ್ನೂ 10 ವರ್ಷ ಮೋದಿಯವರನ್ನು ಅಲುಗಾಡಿಸಲು ಆಗಲ್ಲ.‌ ಜಮೀರ್ ಅಹ್ಮದ್ ಇನ್ನೊಮ್ಮೆ ಇಂತಹ ಹೇಳಿಕೆ ನೀಡಿದ್ರೆ ಬಹುಶಃ ಅದೇ ಡ್ರೆಸ್ ಹಾಕಿಕೊಳ್ಳುವುದು ಖಾಯಂ ಆಗುತ್ತೇ ಅಂತಾ ಗದಗನಲ್ಲಿ ಸಚಿವ ಸಿ ಸಿ ಪಾಟೀಲ ವ್ಯಂಗವಾಗಿ ತಿರುಗೇಟು ನೀಡಿದ್ರು.ಇನ್ನು ಕುಮಾರಸ್ವಾಮಿ ಮಂಗಳೂರಿನಲ್ಲಿ CD ಬಿಡುಗಡೆ ವಿಚಾರಕ್ಕೆ ಮಾತನಾಡಿದ ಸಚಿವ ಸಿಸಿ ಪಾಟೀಲ್ ಕುಮಾರಸ್ವಾಮಿ ಅವರು ಸಿಡಿ ಮೊದಲಿನಿಂದ ಮಾಡಿಕೊಂಡು ಬಂದಿದ್ದಾರೆ, ಜನಾರ್ದನ ರಡ್ಡಿ ದು ಒಂದು ಸಿಡಿ ಮಾಡಿದ್ರೂ ಹಾಗೆ ಇದು ಒಂದು ಸಿಡಿ ಮಾಡಿದ್ದಾರೆ.ಜನರನ್ನು ದ್ವಂದದಲ್ಲಿ ಇಡೋ ಪ್ರಯತ್ನ ಅವರದು ಅಂದರು. ಮಹದಾಯಿ ಗಾಗಿ ಹೋರಾಟ ಮಾಡಿದ್ದು ಬಿಜೆಪಿ ಅವರೇ ಮಹದಾಯಿ ನೀರನ್ನು ನಾವು ಪಡಕೊಂಡೆ ಪಡಕೊಂತಿವಿ, ಆ ಕೆಲಸವನ್ನಿ ನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ ಎಂದರು

ಬೈಟ್-ಸಿ ಸಿ ಪಾಟೀಲ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ.Body:GConclusion:G

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.