ಗದಗ : ಮಂತ್ರಿ ಮಂಡಲದಲ್ಲಿ ಯಾರನ್ನ ಸೇರಿಸಿಕೊಳ್ಳಬೇಕು ಅನ್ನೋದು ಸಿಎಂ ಪರಮಾಧಿಕಾರ. ಅವರ ಅಧಿಕಾರವನ್ನು ಯಾರೂ ಪ್ರಶ್ನಿಸುವಂತಿಲ್ಲ ಅನ್ನೋ ಮೂಲಕ ಸಚಿವ ಸಿ ಸಿ ಪಾಟೀಲ್, ಖ್ಯಾತೆ ಕ್ಯಾತೆ ತೆಗೆದ ಮಿನಿಸ್ಟರ್‌ಗಳಿಗೆ ತಿರುಗೇಟು ನೀಡಿದರು.
ಸಚಿವ ಆನಂದ್ ಸಿಂಗ್ ಪ್ರಭಾವಿ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಅದು ಸಚಿವ ಸಿ.ಸಿ ಪಾಟೀಲರ ಲೋಕೋಪಯೋಗಿ ಖಾತೆ ಮೇಲೆ ಕಣ್ಣಿಟ್ಟಿದ್ದು, ಬಿಟ್ಟು ಕೊಡ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿ ಸಿ ಪಾಟೀಲ ಗರಂ ಆದರು. ಅಲ್ಲದೆ, ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ನೀಡಿದ ಖಾತೆಯಲ್ಲಿ ಛಾಪು ಮೂಡಿಸುವ ಕೆಲಸ ಮಾಡುತ್ತೇನೆ ಎಂದು ಖಾತೆ ಬದಲಾವಣೆ ಅಸಾಧ್ಯ ಎನ್ನುವ ಸಂದೇಶ ನೀಡಿದರು.
ಮೀಸಲಾತಿ ಹೋರಾಟ ಸೆನ್ಸಿಟಿವ್ ವಿಷಯ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಕುರಿತು ಮಾತನಾಡಿ, ಮೀಸಲಾತಿ ಹೋರಾಟ ಸೆನ್ಸಿಟಿವ್ ವಿಷಯ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ನಾನು ಸರ್ಕಾರ ಹಾಗೂ ಸಮಾಜದ ಒಬ್ಬ ವ್ಯಕ್ತಿಯಾಗಿ ಏನನ್ನೂ ಬಹಿರಂಗಪಡಿಸಲಾಗಲ್ಲ.
ಇತ್ತ ಸರ್ಕಾರಕ್ಕೆ ಇರುಸುಮುರಿಸು ಆಗಬಾರದು, ಅತ್ತ ಸಮಾಜಕ್ಕೆ ನೋವು ಆಗಬಾರದು. ಅದಕ್ಕಾಗಿ ಸ್ವಾಮೀಜಿಗಳನ್ನು ಸಿಎಂಗೆ ಭೇಟಿ ಮಾಡಿಸಿ, ವಿಶ್ವಾಸದಿಂದ ಇದ್ದು ಕೆಲಸ ಮಾಡುತ್ತೇನೆ. ಮಾಧ್ಯಮದವರ ಎದುರಿಗೆ ಈ ಬಗ್ಗೆ ನಾನು ಏನನ್ನೂ ಹೇಳಲು ಇಚ್ಛಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.