ETV Bharat / state

ಕೊರೊನಾ ಆತಂಕ: ಶೇಕ್ ಹ್ಯಾಂಡ್​ ಬಿಡಿ, ನಮಸ್ಕಾರ ಹೇಳಿ ಅಂದ್ರು ಸಚಿವ ಸಿ.ಸಿ. ಪಾಟೀಲ್

ವಿಶ್ವದಾದ್ಯಂತ ಕೊರೊನಾ ಭೀತಿ ಆವರಿಸಿರುವ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ್ ಶೇಕ್ ಹ್ಯಾಂಡ್​ ಬಿಟ್ಟು ನಮ್ಮ ನಮಸ್ಕಾರದ ಸಂಸ್ಕೃತಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Minister C.C. Patil statement
ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್
author img

By

Published : Mar 15, 2020, 9:08 AM IST

ಗದಗ: ಶೇಕ್ ಹ್ಯಾಂಡ್​ ಬಿಟ್ಟು ನಮ್ಮ ನಮಸ್ಕಾರದ ಸಂಸ್ಕೃತಿ ಅಳವಡಿಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಸಲಹೆ ನೀಡಿದ್ದಾರೆ.

ಶೇಕ್​ ಹ್ಯಾಂಡ್​ ಬದಲು ನಮಸ್ಕಾರ ಹೇಳುವಂತೆ ಸಚಿವ ಸಿ ಸಿ ಪಾಟೀಲ್​ ಸಲಹೆ

ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊರೊನಾ ಭೀತಿ ಹಿನ್ನೆಲೆ ಮಾ. 15 ಮತ್ತು 16ರಂದು ನಿಗದಿಯಾಗಿದ್ದ ಮುಖ್ಯಮಂತ್ರಿ ಅವರ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಇನ್ನು ಜಿಲ್ಲೆಯ ಜನತೆ ಹುಚ್ಚು ಸಾಹಸಕ್ಕೆ ಹೋಗುವುದು ಬೇಡ. ಶೇಕ್ ಹ್ಯಾಂಡ್​ ಕೊಡುವುದನ್ನು ಬಿಟ್ಟು ನಮ್ಮ ನಮಸ್ಕಾರದ ಸಂಸ್ಕೃತಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ರು. ಜಿಲ್ಲೆಯಲ್ಲಿ ವಿದೇಶಿ ಪ್ರವಾಸ ಮುಗಿಸಿ ಬಂದವರು 41 ಜನರಿದ್ದಾರೆ. ಆ ಪೈಕಿ 6 ಜನರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ಅದರಲ್ಲಿ 4 ಜನರ ರಿಪೋರ್ಟ್‌ ನೆಗೆಟಿವ್ ಬಂದಿದ್ದು, ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇನ್ನೂ ಇಬ್ಬರದ್ದು ವರದಿ ಬರಬೇಕಾಗಿದೆ. ಆದರೆ ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಎಂದರು.

ಇನ್ನು, ಜಿಲ್ಲೆಯಲ್ಲಿ ಎಲ್ಲಿಯಾದರೂ ಮಾಸ್ಕ್ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹ ಇಂಥ ಪ್ರಕರಣಗಳು ಕಂಡು ಬಂದಲ್ಲಿ ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು. ಆರೋಗ್ಯ ಇಲಾಖೆ ಎಲ್ಲಾ ರೀತಿಯಿಂದಲೂ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ 7 ಆ್ಯಂಬುಲೆನ್ಸ್ ಕಾಯ್ದಿರಿಸಲಾಗಿದ್ದು, ಒಟ್ಟು 46 ಐಸೋಲೇಶನ್ ಘಟಕಗಳನ್ನು ಸ್ಥಾಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೇಕಾಗುವ ಸಲಕರಣೆಗಳನ್ನ ಕ್ರೋಢಿಕರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.