ಗದಗ : ಮಹದಾಯಿ ಯೋಜನೆಯಲ್ಲಿ ರಾಜಕೀಯ ಮಾಡೋದನ್ನು ಬಿಟ್ಟು ನೀರು ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು ಒತ್ತಾಯ ಮಾಡಿದ್ದಾರೆ.
ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಯೋಜನೆ ಜಾರಿಗಾಗಿ ಕಳೆದ ನಾಲ್ಕುವರೆ ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವ ಹೋರಾಟಗಾರರು ಆಗ್ರಹಿಸಿದ್ದಾರೆ. ಕೆಲವು ನಾಯಕರು ನಾವು ಕೇಂದ್ರದ ನಾಯಕರ ಮೇಲೆ ಒತ್ತಡ ತಂದು ಯೋಜನೆ ಜಾರಿಗಾಗಿ ಪ್ರಯತ್ನ ಮಾಡಿರೋದಾಗಿ ಹೇಳುತ್ತಿದ್ದಾರೆ. ಇದು ರೈತ ಹೋರಾಟಗಾರರಿಗೆ ಸಿಕ್ಕ ಜಯ, ಹಲವು ರೈತರು ಜೀವ ತ್ಯಾಗ ಮಾಡಿದ್ದಾರೆ, ಅವರ ಬಲಿದಾನದಿಂದ ಹೋರಾಟ ಕಟ್ಟಿಯಾಗಿದೆ. ನೀರು ಬರುವವರಿಗೂ ನಾವು ಹೋರಾಟ ಮಾಡುತ್ತೇವೆ.
ಇದರಲ್ಲಿ ರಾಜಕೀಯ ಮಾಡೋದನ್ನು ಬಿಡಬೇಕು. ಹೀಗೆ ಮಾಡೋದರಿಂದಲೇ ಗೋವಾ ಸರ್ಕಾರ ಕ್ಯಾತೆ ತೆಗೆದಿದೆ. ಹಾಗಾಗಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕಾಮಗಾರಿ ಆರಂಭ ಮಾಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.