ETV Bharat / state

ಕೊರೊನಾ ಭೀತಿ: ರಾತ್ರೋರಾತ್ರಿ ಜಾತ್ರೆಗೆ ಬಂದ ವ್ಯಾಪಾರಸ್ಥರ ಟೆಂಟ್ ಖಾಲಿ - ಮುಂಡರಗಿ ಪಟ್ಟಣದ ಲಕ್ಷ್ಮೀ‌ ಕನಕನರಸಿಂಹ ಜಾತ್ರೆ

ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರ ಕಟ್ಟೆಚ್ಚರ ವಹಿಸಿದೆ. ಹೀಗಾಗಿ ಮುಂಡರಗಿ ಪಟ್ಟಣದ ಲಕ್ಷ್ಮೀ‌ ಕನಕನರಸಿಂಹ ಜಾತ್ರೆಗೂ ಬ್ರೇಕ್ ಬಿದ್ದಿದೆ.

Lakshmi Kanakarasimha  Jathramahotsava
ಕೊರೊನಾ ಭೀತಿ ಹಿನ್ನಲೆ ರಾತ್ರೋರಾತ್ರಿ ಜಾತ್ರೆಗೆ ಬಂದ ವ್ಯಾಪಾರಸ್ಥರ ಟೆಂಟ್ ಖಾಲಿ
author img

By

Published : Mar 14, 2020, 1:55 PM IST

ಗದಗ: ಕರ್ನಾಟಕದಲ್ಲಿ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರ ಕಟ್ಟೆಚ್ಚರ ವಹಿಸಿದೆ. ಈ ಹಿನ್ನೆಲೆ ಜಿಲ್ಲೆಯ ಮುಂಡರಗಿ ಪಟ್ಟಣದ ಲಕ್ಷ್ಮೀ‌ ಕನಕನರಸಿಂಹ ಜಾತ್ರೆಗೂ ಬ್ರೇಕ್ ಬಿದ್ದಿದೆ.

ಕೊರೊನಾ ಭೀತಿ ಹಿನ್ನಲೆ ರಾತ್ರೋರಾತ್ರಿ ಜಾತ್ರೆಗೆ ಬಂದ ವ್ಯಾಪಾರಸ್ಥರ ಟೆಂಟ್ ಖಾಲಿ

ಇದರ ಪರಿಣಾಮ ಜಾತ್ರೆಗೆ ಬಂದಿರುವ ಅಂಗಡಿ ಮುಗ್ಗಟ್ಟುಗಳನ್ನು ತೆರವು ಮಾಡಿಸೋ ಕೆಲಸವನ್ನ ಸ್ಥಳೀಯ ತಾಲೂಕು ಆಡಳಿತ ಹಾಗೂ ಪುರಸಭೆ ಮಾಡ್ತಾ ಇದೆ. ದೂರದ ಊರುಗಳಿಂದ ಬಂದು ಟೆಂಟ್ ಹಾಕಿಕೊಂಡಿದ್ದ ವ್ಯಾಪಾರಸ್ಥರು ಇದೀಗ ಬೇಸರದಿಂದ ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಏಕಾಏಕಿ ಸರ್ಕಾರದ ನಿರ್ದೇಶನದಿಂದ ಸಾಕಷ್ಟು ಬಂಡವಾಳ ಹಾಕಿದ್ದ ವ್ಯಾಪಾರಸ್ಥರು ಇದೀಗ ಕಂಗಾಲಾಗಿದ್ದಾರೆ. ಇಂದು ಜಾತ್ರೆ ನಿಮಿತ್ತವಾಗಿ ರಥೋತ್ಸವ ನಡೆಯಲಿದ್ದು, ನೂರು‌ ಭಕ್ತರನ್ನು ಮೀರದ ರೀತಿಯಲ್ಲಿ ರಥೋತ್ಸವ‌ ನಡೆಸಲಾಗ್ತದೆ ಎಂದು ಸ್ಥಳೀಯ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು‌ ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.