ETV Bharat / state

ಜಿಮ್ಸ್ ಎಡವಟ್ಟು.. ತಿಥಿ ಮುಗಿದ ಬಳಿಕ ಸೋಂಕಿತೆಯ ಶವ ತಂದ ಸಿಬ್ಬಂದಿ..

author img

By

Published : Jul 31, 2020, 9:01 PM IST

ಜುಲೈ 29ರಂದು ಬಂಧು-ಬಳಗ ಕರೆಯಿಸಿ ವೈಕುಂಠ ಸಮಾರಾಧನೆಯನ್ನೂ ನೆರವೇರಿಸಿದ್ದಾರೆ. ಆದರೆ, ಮರುದಿನ ಜಿಮ್ಸ್ ಸಿಬ್ಬಂದಿ ಅಂತ್ಯ ಸಂಸ್ಕಾರಕ್ಕೆ ಶವ ತೆಗೆದುಕೊಂಡು ಬಂದಿದ್ದಾರೆ..

JIMS hospital messup..staff delivers dead body of old lady who dies from corona after his last rituals
ಜಿಮ್ಸ್ ಎಡವಟ್ಟು...ತಿಥಿ ಮುಗಿದ ಬಳಿಕ ಸೋಂಕಿತೆಯ ಶವ ತಂದ ಸಿಬ್ಬಂದಿ..!

ಗದಗ : ಪಾಶ್ವವಾಯು ಹಾಗೂ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರಗೆ ದಾಖಲಾಗಿದ್ದ ವೃದ್ಧೆ ಕೊರೊನಾದಿಂದಾಗಿ ಸಾವನಪ್ಪಿದ್ದರು. ವೃದ್ಧೆಯ ತಿಥಿ ಕಾರ್ಯ ಮುಗಿದ ಮಾರನೆ ದಿನ ಜಿಮ್ಸ್ ಸಿಬ್ಬಂದಿ ಶವ ತೆಗೆದುಕೊಂಡ ಬಂದ ಘಟನೆ ನಡೆದಿದೆ.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ 70 ವರ್ಷದ ವೃದ್ಧೆ ಪಾರ್ಶ್ವವಾಯು ಹಾಗೂ ಅನಾರೋಗ್ಯದ ಹಿನ್ನೆಲೆ ಜುಲೈ 15ರಂದು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಇವರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್​​ ಬಂದಿತ್ತು. ಇದಾದ ಬಳಿಕ ಜುಲೈ 20ರಂದು ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಜಿಮ್ಸ್ ಎಡವಟ್ಟು.. ತಿಥಿ ಮುಗಿದ ಬಳಿಕ ಸೋಂಕಿತೆಯ ಶವ ತಂದ ಸಿಬ್ಬಂದಿ..

ಬಳಿಕ ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಿದ್ದು, ಜುಲೈ 29ರಂದು ಬಂಧು-ಬಳಗ ಕರೆಯಿಸಿ ವೈಕುಂಠ ಸಮಾರಾಧನೆಯನ್ನೂ ನೆರವೇರಿಸಿದ್ದಾರೆ. ಆದರೆ, ಮರುದಿನ ಜಿಮ್ಸ್ ಸಿಬ್ಬಂದಿ ಅಂತ್ಯ ಸಂಸ್ಕಾರಕ್ಕೆ ಶವ ತೆಗೆದುಕೊಂಡು ಬಂದಿದ್ದಾರೆ.

ಇದನ್ನು ಕಂಡು ಸ್ವತಃ ಮಗ ಪರಸಪ್ಪ ವೀರಪ್ಪ ಗಡ್ಡದ ದಂಗಾಗಿದ್ದಾರೆ. ಅಂತ್ಯಸಂಸ್ಕಾರವೇ ಮುಗಿದ ಮೇಲೆ ತಾಯಿಯ ಶವ ಈಗ ಎಲ್ಲಿಂದ ಬಂತು ಅಂತಾ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಶವ ನನ್ನ ತಾಯಿಯದ್ದಲ್ಲ ಅಂತಾ ಜಿಮ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.