ಗದಗ: ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ್ ಅವರ ಮೇಲೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತೀವ್ರ ವಾಗ್ದಾಳಿ ನಡೆಸಿದ್ರು.
ಗದಗದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ ಮೋದಿ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ್ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿ, ನೀವು ಬಹಿರಂಗ ಚರ್ಚೆ ಅನ್ನುವ ನಾಟಕ ಬಿಡ್ರಿ. ಇವಾಗ ಏನ್ ಮಾಡುತ್ತಿದ್ದೇವೆ ಇದೇ ಬಹಿರಂಗ ಚರ್ಚೆ. ಜನರ ಮುಂದೆ ನಿಮ್ಮ ವಿಷಯ ನೀವು ಹೇಳ್ರಿ, ನಮ್ಮ ವಿಷಯ ನಾವು ಹೇಳ್ತೀವಿ. ಏಪ್ರಿಲ್ 23 ರ ನಂತರ ಜನ್ರು ತೀರ್ಮಾನ ಮಾಡ್ತಾರೆ ಅಂದ್ರು.
ಚರ್ಚೆ ಮಾಡೋ ನೀವು ಐದು ವರ್ಷ ಯಾಕ್ ಸುಮ್ಮನೆ ಕುಳಿತಿದ್ರಿ. ಈ ಭಾಗದ ನೀರಾವರಿ ಯೋಜನೆಯಾದ ಕಳಸಾ ಬಂಡೂರಿ ಹಾಗೂ ಮಹದಾಯಿ ವಿಚಾರ ಇವಾಗ ಏನ್ ಆಗಿದೆ. ಸರ್ಕಾರದ ಮೇಲೆ ಒತ್ತಡ ಹೇರಿ ಕೇಂದ್ರಕ್ಕೆ ಒಂದು ಪ್ರಪೋಜಲ್ ಕಳಿಸೋಕೆ ಆಗಿಲ್ಲ ಅಂತ ಹರಿಹಾಯ್ದರು.