ETV Bharat / state

15 ದಿನ ನೀರು ಬಿಡಬೇಕು ಅನ್ನೋದು ಕಠೋರ ನಿರ್ಣಯ : ಸಚಿವ ಎಚ್ ಕೆ ಪಾಟೀಲ್​ - ಕಾವೇರಿ ನೀರಿನ ಹಂಚಿಕೆ ವಿಚಾರ

ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ 10 ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂಬುದು ನಮ್ಮ ನಿಲುವು ಆಗಿತ್ತು ಎಂದು ಸಚಿವ ಹೆಚ್​ ಕೆ ಪಾಟೀಲ್ ಅವರು ತಿಳಿಸಿದ್ದಾರೆ.

ಸಚಿವ ಎಚ್ ಕೆ ಪಾಟೀಲ್​
ಸಚಿವ ಎಚ್ ಕೆ ಪಾಟೀಲ್​
author img

By ETV Bharat Karnataka Team

Published : Aug 29, 2023, 10:49 PM IST

ಸಚಿವ ಎಚ್ ಕೆ ಪಾಟೀಲ್​

ಗದಗ : 15 ದಿನ ನೀರು ಬಿಡಬೇಕು ಅನ್ನೋದು ಕಠೋರ ನಿರ್ಣಯ ಎಂದು ಸಚಿವ ಎಚ್. ಕೆ ಪಾಟೀಲ್​ ಹೇಳಿದ್ದಾರೆ. ಕಾವೇರಿ ನೀರು ನಿರ್ವಹಣಾ ಸಮಿತಿ ಸೂಚನೆ ಬಗ್ಗೆ ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ 10 ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂಬುದು ನಮ್ಮ ನಿಲುವು ಆಗಿತ್ತು. ಈ ನಿಲುವು ಸರಿಯಾಗಿದೆ ಅಂತಾ ನೀರು ನಿರ್ವಹಣಾ ಸಮಿತಿ ಒಪ್ಪಿಕೊಂಡಂತಿದೆ. ಅಷ್ಟರ ಮಟ್ಟಿಗೆ ಸಮಾಧಾನ ತರಿಸಿದೆ. ಆದ್ರೆ 15 ದಿನ ನೀರು ಹರಿಸಬೇಕು ಎಂಬುದು ಕಠೋರ ನಿರ್ಣಯವಾಗಿದೆ ಎಂದು ಹೇಳಿದರು.

ಸಮಿತಿ ನಿರ್ಣಯ ಕಾವೇರಿ ರಿವರ್ ಅಥಾರಟಿ ಮುಂದೆ ಹೋಗುತ್ತೆ. ಅವರು 15 ದಿನ ನೀರು ಬಿಡುವ ನಿರ್ಧಾರ ಕಡಿತಗೊಳಿಸಲು ಪರಿಶೀಲನೆ ಮಾಡಬೇಕು. ಆ ದಿಸೆಯಲ್ಲಿ‌ ರಾಜ್ಯ ಸರ್ಕಾರ ಪ್ರಯತ್ನ ಮಾಡಲಿದೆ ಎಂದು ಸಚಿವರು ತಿಳಿಸಿದರು.

ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ : ಅವಧಿ ಪೂರ್ವ ಲೋಕಸಭೆ ಚುನಾವಣೆ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನವೆಂಬರ್ ಅಥವಾ ಡಿಸೆಂಬರ್ ಆಗದಿದ್ದರೆ ಜನವರಿಯಲ್ಲಾದ್ರೂ ಎಲೆಕ್ಷನ್ ಮಾಡಲಿ. ಕರ್ನಾಟಕ ಮತದಾರರ ಮನಸ್ಸು ನೋಡಿದ ಮೇಲೆ ಬಿಜೆಪಿ ಕೇಂದ್ರದಲ್ಲಿ ಸೋಲು ಅಂತಾ ಗೊತ್ತಾಗಿದೆ. ಚುನಾವಣೆಯನ್ನ ಯಾವಾಗ್ಲಾದ್ರೂ ಮಾಡ್ಲಿ‌, ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು.

ಆ ಕಾರಣಕ್ಕೆ ನಮ್ಮ ಪಕ್ಷದತ್ತ ಹಲವು ನಾಯಕರು, ಕಾರ್ಯಕರ್ತರು ಧಾವಿಸುತ್ತಿದ್ದಾರೆ. ರಾಜಕೀಯವಾಗಿ ಉತ್ತಮ ಹಾಗೂ ಆರೋಗ್ಯಕರ ಬೆಳವಣಿಗೆ ಇದೆ. ಕಾಂಗ್ರೆಸ್ ಮನಸ್ಸನ್ನು ಅರಿತವರು, ಸಮಾಜವಾದಿ ತತ್ವದಲ್ಲಿ ವಿಶ್ವಾಸವಿರುವವರು, ಜಾತ್ಯತೀತ ಮನೋಭಾವನೆ ಇರುವವರು, ಬಡವರ ಬಗ್ಗೆ ಕಳಕಳಿ ಇರುವವರಿಗೆ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಎಂದು ಎಚ್​ ಕೆ ಪಾಟೀಲ್​ ಹೇಳಿದರು.

ಬಿಜೆಪಿಯಲ್ಲಿ ಬಹಳ ಸ್ನೇಹಿತರು ಇದ್ದಾರೆ: ನಮ್ಮನ್ನ ಯಾರು ಸಂಪರ್ಕ ಮಾಡಿದ್ದಾರೆ ಎಂಬುದು ಚರ್ಚೆಯ ವಿಷಯವಲ್ಲ. ಆದ್ರೆ ಬಹಳಷ್ಟು ನಾಯಕರು ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ. ಬಹಳಷ್ಟು ಜನ ಇದ್ದಾರೆ. ನೀವು ಹೇಳುವುದಕ್ಕಿಂತ ಡಬಲ್ ಸಂಖ್ಯೆಯಲ್ಲಿ ನಾಯಕರು ಸಂಪರ್ಕದಲ್ಲಿದ್ದಾರೆ. ಗದಗನಿಂದ ಯಾರೂ ಸಂಪರ್ಕದಲ್ಲಿಲ್ಲ. ಆದ್ರೆ ಬಿಜೆಪಿಯಲ್ಲಿ ಬಹಳ ಸ್ನೇಹಿತರು ಇದ್ದಾರೆ ಎಂದು ಬಿಜೆಪಿ ಸೇರಿದಂತೆ ಇತರೆ ಪಕ್ಷದಿಂದ ತಮ್ಮ ಪಕ್ಷಕ್ಕೆ ಬರುವವರನ್ನು ಪರೋಕ್ಷವಾಗಿ ಸ್ವಾಗತ ಮಾಡಿದರು.

ಪ್ರವಾಸೋದ್ಯಮದಲ್ಲಿ 300 ಕೋಟಿ ಬಂಡವಾಳ ಹೂಡಿಕೆ : ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉನ್ನತಾಧಿಕಾರ ಸಮಿತಿಯು ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 300 ಕೋಟಿ ರೂ. ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ ಪಾಟೀಲ್ (ಜುಲೈ 28-2023) ತಿಳಿಸಿದ್ದರು.

ಇದನ್ನೂ ಓದಿ : ಪ್ರವಾಸೋದ್ಯಮದಲ್ಲಿ 300 ಕೋಟಿ ರೂ ಬಂಡವಾಳ ಹೂಡಿಕೆಗೆ ಅನುಮೋದನೆ: ಸಚಿವ ಎಚ್ ಕೆ ಪಾಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.