ಗದಗ : ನಗರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ತುಂಬಾ ಕಲರ್ಫುಲ್ ಆಗಿತ್ತು. ನಗರದ ವಿಠಲಾರೂಢ ಮಂಗಳ ಭವನದಲ್ಲಿ ಗದಗ ಜಿಲ್ಲಾ ಸಮಸ್ತ ಮಹಿಳಾ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಮಣಿಗಳು ಬಣ್ಣ ಬಣ್ಣದ ಡ್ರೆಸ್ ತೊಟ್ಟು, ತಾವು ಯಾರಿಗೂ ಕಮ್ಮಿಯಿಲ್ಲ ಎನ್ನುವಂತೆ ಭರ್ಜರಿ ಕ್ಯಾಟ್ ವಾಕ್ ಹಾಗೂ ಜಾನಪದ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
ಕಲರ್ ಕಲರ್ ಸೀರೆ ತೊಟ್ಟ ಮಹಿಳಾ ಮಣಿಗಳ ಗತ್ತು ಗಮ್ಮತ್ತು, ಜೋಷ್, ಬಿನ್ನಾಣ, ವಯ್ಯಾರ ಜೋರಾಗಿತ್ತು. ಈ ಮಹಿಳೆಯರ ಕ್ಯಾಟ್ ವಾಕ್ ನೋಡುಗರ ಕಣ್ಮನ ಸೆಳೆಯಿತು. ಆ ಮಹಿಳಾ ಮಣಿಗಳ ಕಲರ್‌ಫುಲ್ ಕಾರ್ಯಕ್ರಮಕ್ಕೆ ಚಿತ್ರನಟಿ ತಾರಾ ಮೆರಗು ಹೆಚ್ಚಿಸಿದರು.
ಇನ್ನೂ ಮಹಿಳಾ ಮಣಿಗಳು ಕಲರ್ ಕಲರ್ ದೇಸಿ ಸೀರೆ ತೊಟ್ಟು ಕ್ಯಾಟ್ ವಾಕ್ ಮಾಡಿ ಮಿಂಚಿದರೆ, ಇತ್ತ ಯುವತಿಯರು ನಾವೇನು ಕಮ್ಮಿಯಿಲ್ಲ ಎನ್ನುವಂತೆ ವೆಸ್ಟರ್ನ್ ಡ್ರೆಸ್ನಲ್ಲಿ ಕ್ಯಾಟ್ ವಾಕ್ ಮಾಡಿ ಫುಲ್ ಮಿಂಚಿದರು. ಈ ಕಾರ್ಯಕ್ರಮದಲ್ಲಿ ಚಿತ್ರನಟಿ ತಾರಾ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ನಟಿ ತಾರಾಗೆ ಮಹಿಳಾ ಮಣಿಗಳಿಂದ ಸನ್ಮಾನ ಮಾಡಲಾಯಿತು.