ಗದಗ : ವೃದ್ಧರೊಬ್ಬರ ಹೊಟ್ಟೆಯಲ್ಲಿ ಗಡ್ಡೆ ಬೆಳೆದು ಅವರು ನಡೆಯಲಾರದ ಪರಿಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಬುಲ್ಡೋಜರ್ ನಗರ ನಿವಾಸಿ ಹನುಮಂತಪ್ಪ (69) ತಮ್ಮ ಹೊಟ್ಟೆಯಲ್ಲಿರುವ ಈ ಗಡ್ಡೆಯಿಂದಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಅಲೆಮಾರಿ ಜನಾಂಗದವರಾದ ಇವರು ಕಳೆದ ಹಲವು ವರ್ಷಗಳಿಂದ ಈ ರೋಗಕ್ಕೆ ತುತ್ತಾಗಿದ್ದಾರೆ. ಗಡ್ಡೆ ದೊಡ್ಡದಾಗಿ ಹೊಟ್ಟೆಯೊಳಗಿನಿಂದ ಜೋತು ಬಿದ್ದಿದೆ. ಯಾವುದೇ ನೋವು ಇಲ್ಲದಿದ್ದರೂ ಓಡಾಡಲು ಇವರಿಗೆ ಕಷ್ಟವಾಗುತ್ತಿದೆ. ಸದ್ಯ ಪತ್ನಿಯೇ ಇವರಿಗೆ ಆಧಾರ. ದುಡಿದು ಸಾಕಲು ಮಕ್ಕಳಿಲ್ಲ. ಸರ್ಕಾರ ನೀಡುವ ಪಡಿತರ ಅಕ್ಕಿಯಿಂದ ಜೀವನ ನಡೆಸುತ್ತಿದ್ದಾರೆ.
ಕಾಯಿಲೆಗೆ ಚಿಕಿತ್ಸೆ ಮಾಡೋಣವೆಂದರೆ ಆಸ್ಪತ್ರೆಯಲ್ಲಿ ಹಣ ಭರಿಸುವ ಶಕ್ತಿ ಇವರಿಗಿಲ್ಲ. ಮಕ್ಕಳ ಮನರಂಜನೆಯ 'ಗರ್ದಿ ಗಮ್ಮತ್ತು' (ಬಯೋಸ್ಕೋಪ್) ನಡೆಸುತ್ತಿದ್ದ ಹನುಮಂತಪ್ಪನವರೀಗ ಆರೋಗ್ಯ ಕೈಕೊಟ್ಟು ಮನೆಯಲ್ಲೇ ಇದ್ದಾರೆ. ದಾನಿಗಳು ಹಾಗು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕುಟುಂಬ ಸಹಾಯ ಯಾಚಿಸಿದೆ.
ಇದನ್ನೂ ಓದಿ: ಅಧಿಕಾರಿಗಳಿಂದ ಸಿಗದ ಸ್ಪಂದನೆ: ಶಿವಮೊಗ್ಗದಲ್ಲಿ ಗ್ರಾಮಸ್ಥರಿಂದಲೇ ರಸ್ತೆ ದುರಸ್ಥಿ