ಗದಗ : ನಗರದ ಉರ್ದು ಶಾಲೆಯೊಂದರಲ್ಲಿ ಮಕ್ಕಳು ಪೋಷಕರು ಹೈಡ್ರಾಮವನ್ನೇ ಸೃಷ್ಟಿಸಿದ್ದಾರೆ. ನಗರದ ಸರಕಾರಿ ಉರ್ದು ಶಾಲೆ ನಂ.2 ನಲ್ಲಿ ಈ ಘಟನೆ ನಡೆದಿದೆ. ಹೈಕೋರ್ಟ್ ಆದೇಶವನ್ನು ಪಾಲಿಸೋಣ ಹಾಗಾಗಿ ಹಿಜಾಬ್ ಕಳಚಿಟ್ಟು ಬನ್ನಿ ಅಂತ ಶಿಕ್ಷಕರು ಹೇಳಿದ್ದೇ ತಡ. ಮಕ್ಕಳು ಪೋಷಕರು ಶಿಕ್ಷಕರ ವಿರುದ್ಧ ಆಕ್ರೋಶಗೊಂಡಿದ್ದಾರೆ.
ನಾವು ಹಿಜಾಬ್ ತೆಗೆಯೋದಿಲ್ಲ. ಬೇಕಿದ್ದರೆ ಶಾಲೆನೇ ಮುಚ್ಚಿ ಅಂತ ಕಿಡಿಕಾರಿದ್ದಾರೆ. ಜೊತೆಗೆ ಪೋಷಕರು ಸಹ ಮಕ್ಕಳ ಜೊತೆಗೆ ಶಿಕ್ಷಕರ ವಿರುದ್ಧ ಕಿಡಿಕಾರಿದ್ದಾರೆ. ಕ್ಲಾಸ್ನಲ್ಲಿ ಕುಳಿತಿದ್ದ ಮಕ್ಕಳನ್ನ ಹೊರಗಡೆ ಕರೆದುಕೊಂಡು ಬಂದ ಮಹಿಳೆಯೊಬ್ಬಳು ವಿವಾದ ಕಿಡಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ಶಾಲೆಯ ಗೇಟ್ ಹೊರಗಡೆ ನಿಂತು ಪೋಷಕರು, ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು.
ನಾವು ಹಿಜಾಬ್ ಬಿಡಲ್ಲ. ಬೇಕಿದ್ರೆ ಶಾಲೆ ಮುಚ್ಚಿಸಿ. ಹಿಜಾಬ್ ತೆಗೆಯದಿದ್ದಕ್ಕೆ ಶಿಕ್ಷಕರೇ ನಮ್ಮನ್ನ ಹೊರಗಡೆ ಹಾಕಿದ್ದಾರೆ ಅಂತ ಆರೋಪ ಮಾಡಿದರು. ಇನ್ನು ಈ ಘಟನೆ ಬಳಿಕ ಸ್ಥಳಕ್ಕೆ ಡಿಡಿಪಿಐ ಜಿಎಂ ಬಸವಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ತಹಶೀಲ್ದಾರ್ ಕಿಶೋರ್ ಕೂಡಾ ಭೇಟಿ ನೀಡಿ ಶಿಕ್ಷಕರ ಜೊತೆಗೆ ಮೀಟಿಂಗ್ ಮಾಡಿದರು.
ಇದನ್ನೂ ಓದಿ : ಹಿಜಾಬ್ ವಿವಾದ : ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭ