ETV Bharat / state

ಭಾರಿ ಮಳೆಗೆ ಕೊಳೆಯುತ್ತಿರುವ ಈರುಳ್ಳಿ; ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ

ಗದಗದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದು, ಕೆಜಿಗೆ 40 ರಿಂದ 50 ರೂಗೆ ಬೆಲೆ ಏರಿಕೆಯಾಗಿದೆ. ಇನ್ನೊಂದೆಡೆ ನಿರಂತರ ಮಳೆಯಿಂದಾಗಿ ಈರುಳ್ಳಿ ಬೆಳೆ ಕೊಳೆಯುತ್ತಿದ್ದು ರೈತರೂ ಸಹ ಕೊರಗುವಂತಾಗಿದೆ.

gadag
ಈರುಳ್ಳಿ ಬೆಳೆ ಹಾನಿ
author img

By

Published : Oct 21, 2020, 11:00 PM IST

ಗದಗ: ಒಂದು ಕಡೆ ರೈತರು ಬೆಳೆನಷ್ಟದಿಂದ ಕಂಗಾಲಾಗಿದ್ರೆ ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ತಲುಪಿದೆ. ಒಂದು ವಾರದ ಹಿಂದೆ 20-30 ರೂ ಇದ್ದ ಈರುಳ್ಳಿ ಈಗ 40-50 ರೂ‌ಗೆ ತಲುಪಿದೆ. ಈ ನಡುವೆ ಮೆಣಸಿನಕಾಯಿ ಬೆಳೆಯೂ ಸಹ ಹಾನಿಗೊಳಗಾಗಿದೆ. ನಿರಂತರ ಮಳೆಯಿಂದಾಗಿ ಮೆಣಸಿನಕಾಯಿ ಹೂವು ಉದುರಿ ಬಿದ್ದು ಕಾಯಿ ಬಿಡದಂತಾಗಿದೆ.

ಗದಗದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದು, ಕೆಜಿಗೆ 40 ರಿಂದ 50. ರೂ.ಗೆ ಬೆಲೆ ಏರಿಕೆಯಾಗಿದೆ. ಇನ್ನೊಂದು ವಾರದಲ್ಲಿ ನೂರರ ಗಡಿ ದಾಟುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇತ್ತ ಮಾರುಕಟ್ಟೆಯಲ್ಲಿ ಗ್ರಾಹಕರ ಪರಿಸ್ಥಿತಿಯಾದರೆ ಇನ್ನೊಂದೆಡೆ ನಿರಂತರ ಮಳೆಯಿಂದಾಗಿ ಈರುಳ್ಳಿ ಬೆಳೆ ಕೊಳೆಯುತ್ತಿದ್ದು ರೈತರೂ ಸಹ ಕೊರಗುತ್ತಿದ್ದಾರೆ. ಹಾತಲಗೇರಿ ಗ್ರಾಮದ ಯಲ್ಲಪ್ಪ ಹಾದಿಮನಿ ಎಂಬ ರೈತ ನಾಲ್ಕು ಎಕರೆ ಜಮೀನಿನಲ್ಲಿ ಸಾಲ ಸೂಲ ಮಾಡಿ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ಬೆಳೆದಿದ್ದ. ಆದರೆ ನಿರಂತರ ಮಳೆಯಿಂದಾಗಿ ಇಡೀ ಈರುಳ್ಳಿ ಕೊಳೆಯುತ್ತಿದೆ. ಒಂದು ಕಡೆ ಮಾರ್ಕೆಟ್​ನಲ್ಲಿ ಈರುಳ್ಳಿಗೆ ದುಬಾರಿ ಬೆಲೆ ಇದ್ರೆ ನಮ್ಮ ಬೆಳೆ ಸಂಪೂರ್ಣ ಹಾಳಾಗಿದೆ ಅಂತ ಕೊರಗುತ್ತಿದ್ದಾನೆ.

ಲಾಭದ ನಿರೀಕ್ಷೆ ಇಟ್ಟು ಈರುಳ್ಳಿ ಬೆಳೆದ ರೈತ ಇದೀಗ ಕಣ್ಣೀರಿಡುವಂತಾಗಿದೆ.

ಇನ್ನು ಈರುಳ್ಳಿ ಬೆಳೆ ಜೊತೆಗೆ ಮೆಣಸಿನಕಾಯಿ ಬೆಳೆಯನ್ನು ಸಹ ಈ ರೈತ ಬೆಳೆದಿದ್ದು, ಇಡೀ ಮೆಣಸಿನ ಕಾಯಿ ಬೆಳೆಯೂ ಸಹ ಹಳದಿ ರೋಗಕ್ಕೆ ತುತ್ತಾಗಿದೆ. ಜೊತೆಗೆ ಮಳೆಯ ರಭಸಕ್ಕೆ ಹೂ ಸಹ ಉದುರಿದ ಪರಿಣಾಮ ಗಿಡದಲ್ಲಿ ಕಾಯಿ ಇರದಂತಾಗಿದೆ. ಹಾಗಾಗಿ ಈರುಳ್ಳಿ ಬಿಟ್ಟರೆ ಮೆಣಸಿನಕಾಯಿಯಲ್ಲಾದ್ರೂ ಲಾಭ ಬಂದೀತು ಎಂದು ಕಾಯುತ್ತಿರೋ ರೈತನಿಗೂ ಸಹ ಹೊಡೆತ ಬಿದ್ದಿದೆ.

ಗದಗ ಜಿಲ್ಲೆಯಲ್ಲಿ ಇಡೀ ಕರ್ನಾಟಕದ ಅರ್ಧದಷ್ಟು ಪಾಲು ಈರುಳ್ಳಿ ಬೆಳೆಯುತ್ತಾರೆ. ಗದಗ ಜಿಲ್ಲೆಯಿಂದಲೇ ಸಾಕಷ್ಟು ಈರುಳ್ಳಿ ರಪ್ತು ಆಗುತ್ತದೆ. ಕಳೆದ ವರ್ಷ ಸಾಕಷ್ಟು ಲಾಭದಲ್ಲಿ ಇದ್ದ ರೈತರಿಗೆ ಈ ಬಾರಿ ಅತಿವೃಷ್ಟಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ‌ಹಾಗಾಗಿ ಬೆಳೆನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡ್ತಿದ್ದಾರೆ.

ಇನ್ನು ಈರುಳ್ಳಿ ಬೆಳೆ‌ ನಷ್ಟದಿಂದ ಅಳಲು ತೋಡಿಕೊಳ್ತಿದ್ರೆ ಇತ್ತ ಎಪಿಎಂಸಿಯಲ್ಲಿ ಕೈಗೆ ಎಟುಕದಂತೆ ಬೆಲೆ ಕಟ್ಟುತ್ತಿದ್ದಾರೆ. ಕೇವಲ 500-600 ಗೆ ಒಂದು ಚೀಲ ಕೇಳ್ತಿದ್ದಾರೆ. ನಾವು ಈರುಳ್ಳಿ ತೆಗೆದುಕೊಂಡು ಹೋಗಿರುವ ವಾಹನದ ಬಾಡಿಗೆಯೂ ಸಹ ಅಷ್ಟು ಬರುವುದಿಲ್ಲ ಅಂತ ರೈತರು ಕಣ್ಣೀರು ಹಾಕ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಮಳೆರಾಯ ಇಡೀ ರೈತ ಸಮುದಾಯಕ್ಕೆ ಕಣ್ಣೀರು ಹಾಕಿಸಿದ್ದು ಮಾತ್ರ ಸುಳ್ಳಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.