ಗದಗ: ಧಾರವಾಡ ಹಾಗೂ ಬೆಳಗಾವಿ ಭಾಗದಲ್ಲಿನ ವರುಣನ ಆರ್ಭಟ ಗದಗ ಜಿಲ್ಲೆಗೆ ಸಂಕಷ್ಟ ತಂದೊಡ್ಡಿದೆ. ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನಲೆ ನವೀಲುತೀರ್ಥ ಡ್ಯಾಂನಿಂದ ಭಾರಿ ಪ್ರಮಾಣದ ನೀರನ್ನ ಹರಿಬಿಡಲಾಗಿದೆ. ಒಂದೆಡೆ ಮಲಪ್ರಭಾ ನದಿ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ನರಗುಂದ ತಾಲೂಕಿನ ಅನೇಕ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.
ಇತ್ತ ಬೆಣ್ಣೆಹಳ್ಳದ ಅಬ್ಬರಕ್ಕೆ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿರುವ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ ಹೊಲದಲ್ಲಿನ ಅಪಾರ ಪ್ರಮಾಣದ ಬೆಳೆಯೂ ಸಹ ಜಲಾವೃತವಾಗಿದ್ದು, ಗ್ರಾಮದ ಒಳಗಡೆಯೇ ಹಳ್ಳ ನಿರ್ಮಾಣವಾಗಿದೆ. ಮಳೆ ನೀರಲ್ಲಿ ಸಿಲುಕಿದ ಗ್ರಾಮಸ್ಥರು ಸಾಮಗ್ರಿಗಳನ್ನ ಹೊರ ತರಲು ಹರಸಾಹಸ ಪಡ್ತಿದಾರೆ.
ಪ್ರವಾಹದ ನರ್ತನಕ್ಕೆ ರಾಷ್ಟ್ರೀಯ ಹೆದ್ದಾರಿ 218 ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ ಸಂಚಾರ ಸ್ಥಗಿತಗೊಂಡಿದೆ.