ಗದಗ: ಮಹಾ ಮಳೆಯಿಂದ ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ 20ಕ್ಕೂ ಹೆಚ್ಚು ಜನರು 19 ಘಂಟೆಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರೋದ್ರಿಂದ ಕೊಣ್ಣೂರು ಗ್ರಾಮಕ್ಕೆ ನೀರು ನುಗ್ಗಿದೆ. ಹೀಗಾಗಿ ಪ್ರವಾಹ ಬಂದ ಕಾರಣ ಗ್ರಾಮಸ್ಥರು ನಡು ನೀರಲ್ಲಿ ಸಿಲುಕಿಕೊಂಡಿದ್ದಾರೆ. ಸಂತ್ರಸ್ತರನ್ನು ರಕ್ಷಿಸಬೇಕಾದ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಕಾಲು ಮುಗಿತೀನಿ ಕಾಪಾಡ್ರೋ.. ಅಂತಾ ನಡುಗಡ್ಡೆ ಸಂತ್ರಸ್ತರು ಅಂಗಲಾಚುತ್ತಿದ್ದಾರೆ.
ಪ್ರವಾಹದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ 20 ಜನರು ಸಿಕ್ಕಿ ಹಾಕಿಕೊಂಡಿದ್ದು, ನೀರಿನ ರಭಸ ಜೋರಾಗಿರುವ ಕಾರಣ ರಕ್ಷಣಾ ಕಾರ್ಯ ವಿಫಲವಾಗಿದೆ.
ಈ ನಡುವೆ ದಿಕ್ಕು ತೋಚದೆ ಜಿಲ್ಲಾಡಳಿತ ಕೈ ಚೆಲ್ಲಿ ಕೂತಿದ್ದು, ಸಂತ್ರಸ್ತರ ರಕ್ಷಣೆಗೆ NDRF ತಂಡ ಆಗಮಿಸುತ್ತದೆ ಎಂಬ ಭರವಸೆ ನೀಡುತ್ತಿದ್ದಾರೆ.