ETV Bharat / state

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಚುನಾವಣೆ ವಿಚಾರ: ಕಾಂಗ್ರೆಸ್​ ಅರ್ಜಿ ವಜಾ - Gadag Bategeri nagara sabha election

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಚುನಾವಣೆ ವಿಚಾರವಾಗಿ ಕಾಂಗ್ರೆಸ್​ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಧಾರವಾಡ ಪೀಠ ವಜಾಗೊಳಿಸಿದೆ. ಅಲ್ಲದೇ ಜಿಲ್ಲಾ ಕೋರ್ಟ್​​ನಲ್ಲಿ ದಾವೆ ಹೂಡಲು ಅವಕಾಶ ನೀಡಲಾಗಿದೆ.

HC Dharwad Bench order on Gadag Bategeri nagara sabha election
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಚುನಾವಣೆ ವಿಚಾರ
author img

By

Published : Mar 15, 2022, 9:10 AM IST

ಗದಗ: ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಚುನಾವಣೆ ವಿಚಾರವಾಗಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಧಾರವಾಡ ಪೀಠ ವಜಾಗೊಳಿಸಿದೆ. ಜನವರಿ 24 ರಂದು ನಡೆದಿದ್ದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಲೋಪವಾಗಿತ್ತು ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಂಗ್ರೆಸ್​ನ ಎಲ್ ಡಿ ಚಂದಾವರಿ ಅವರ ಪರವಾಗಿ ಅತಿ ಹೆಚ್ಚು ಸಹಿ ಸಂಗ್ರಹವಾಗಿದ್ದು, ಅಧ್ಯಕ್ಷರನ್ನಾಗಿ ಚಂದಾವರಿ ಅವರನ್ನು ಘೋಷಿಸಬೇಕು ಅಂತಾ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ರು.

35 ವಾರ್ಡ್​​ಗಳ ಪೈಕಿ 18ರಲ್ಲಿ ಬಿಜೆಪಿ, 15ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇಬ್ಬರು ಪಕ್ಷೇತರ ಬೆಂಬಲದೊಂದಿಗೆ ಕಾಂಗ್ರೆಸ್ 17 ಸಂಖ್ಯಾಬಲ ಹೊಂದಿತ್ತು. ಅಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸಂಸದ ಶಿವಕುಮಾರ್ ಉದಾಸಿ ಕಾಂಗ್ರೆಸ್ ಪಟ್ಟಿಯಲ್ಲಿ ಸಹಿ ಮಾಡಿದ್ರು ಎನ್ನಲಾಗಿತ್ತು.

ಹಾಗಾಗಿ ಚುನಾವಣೆ ಪ್ರಕ್ರಿಯೆ ಗೊಂದಲವಾಗಿದೆ. ಬಿಜೆಪಿಯ ಉಷಾ ದಾಸರ್ ಬದಲಾಗಿ ಕಾಂಗ್ರೆಸ್​ನ ಚಂದಾವರಿ ಅವರನ್ನೇ ಅಧ್ಯಕ್ಷರನ್ನಾಗಿ ಘೋಷಣೆ ಮಾಡಬೇಕು ಇಲ್ಲವೇ ಮರು ಚುನಾವಣೆ ಆಗಬೇಕೆಂದು ಕಾಂಗ್ರೆಸ್ ಹಿರಿಯ ಶಾಸಕ ಹೆಚ್ ಕೆ ಪಾಟೀಲ್​ ಆಗ್ರಹಿಸಿದ್ದರು.

ಈ ಹಿನ್ನೆಲೆ ಕಾನೂನು ಹೋರಾಟಕ್ಕೂ ಮುಂದಾಗಿದ್ದ ಕಾಂಗ್ರೆಸ್, ಫೆಬ್ರವರಿ 1ರಂದು ರಿಟ್ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ನ್ಯಾಯಮೂರ್ತಿ ಸೂರಜ್ ಗೋಂದರಾಜ್ ನಿನ್ನೆ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅಲ್ಲದೇ ಜಿಲ್ಲಾ ಕೋರ್ಟ್​​ನಲ್ಲಿ ದಾವೆ ಹೂಡಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಬಾಲಕ ಚಲಾಯಿಸುತ್ತಿದ್ದ ಬೈಕ್ ಅಪಘಾತ: ಓರ್ವ ವಿದ್ಯಾರ್ಥಿ ಸಾವು

ಜೊತೆಗೆ ಚುನಾವಣೆ ಪ್ರಕ್ರಿಯೆಯಲ್ಲಿ‌ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ತನಿಖೆ ನಡೆಸಿ ವರದಿ ಸಲ್ಲಿಸಲು ಕೋರ್ಟ್ ನಿರ್ದೇಶನ ನೀಡಿದೆ. ಹಾಗಾಗಿ ಅಧ್ಯಕ್ಷ ಸ್ಥಾನದಲ್ಲಿ ಬಿಜೆಪಿಯ ಉಷಾ ದಾಸರ್, ಉಪಾಧ್ಯಕ್ಷರಾಗಿ ಬಿಜೆಪಿಯ ಸುನಂದಾ ಬಾಕಳೆ ಮುಂದುವರೆಯಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.