ETV Bharat / state

ಸಿದ್ದರಾಮಯ್ಯನವರಿಗೆ ವಯಸ್ಸು ಎಷ್ಟಾದರೂ ಇರಲಿ ತಕರಾರು ಯಾಕೆ : ಎಚ್ ಕೆ ಪಾಟೀಲ - ಗದಗ

ಸಿದ್ದರಾಮಯ್ಯ ಅವರ ಮನೆಯವರು, ಅಭಿಮಾನಿಗಳು ಹಾಗೇ ಸ್ವತಃ ಅವರೇ 75 ವರ್ಷ ಆಗಿದೆ ಎಂದು ಒಪ್ಪಿಕೊಂಡ ನಂತರ ಮತ್ತೆ ಅದರಲ್ಲಿ ಪ್ರಶ್ನೆ ಮಾಡುವ ಅಗತ್ಯ ಇಲ್ಲ ಎಂದು ಎಚ್ ಕೆ ಪಾಟೀಲ್​ ಹೇಳಿದರು.

h-k-patil
ಎಚ್ ಕೆ ಪಾಟೀಲ
author img

By

Published : Aug 7, 2022, 8:39 PM IST

ಗದಗ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಯಸ್ಸು ಎಷ್ಟಾದರೂ ಇರಲಿ, ತಕರಾರು ಯಾಕೆ? ಅಂತ ಕಿಡಿಕಾರಿದರು. ಸಿದ್ದರಾಮಯ್ಯನವರೇ ನನಗೆ 75 ವಯಸ್ಸು ಆಗಿದೆ ಅಂತ ಒಪ್ಪಿಕೊಂಡಿದ್ದಾರೆ. ಹುಟ್ಟಿದ್ದ ಡೇಟ್ ನಮ್ಮಪ್ಪ ಅಮ್ಮನಿಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ ಟೀಚರ್ ದಾಖಲಿಸಿದ್ದು ಅಂತ ಅವರೇ ಹೇಳಿಕೊಂಡಿದ್ದಾರೆ ಎಂದು ಶಾಸಕ ಎಚ್ ಕೆ ಪಾಟೀಲ್ ತಿಳಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ, ನಾವು ಒಪ್ಪಿಕೊಂಡಿದ್ದೇವೆ. ಅವರ ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಅಂತ ಹೇಳಿದ್ರು.

ಸಿದ್ದರಾಮೋತ್ಸವ ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವ ಕಾರ್ಯಕ್ರಮ. ನಮ್ಮ ಪಕ್ಷಕ್ಕೆ ಇದರಿಂದ ದೊಡ್ಡ ಶಕ್ತಿ ಬಂದಿದೆ. ಈ ಕಾರಣಕ್ಕೆ ಬಹಳ ಜನ ಕಸಿವಿಸಿಗೊಂಡಿದ್ದಾರೆ, ಗಾಬರಿಯಾಗಿದ್ದಾರೆ. ಜನರ ಪ್ರೀತಿಯಿಂದ ಅಷ್ಟು ದೊಡ್ಡ ಕಾರ್ಯಕ್ರಮ ಆಗಿದೆ. ಅವರಿಗೆ 75 ವಯಸ್ಸು ಪೂರ್ಣಗೊಂಡಿಲ್ಲ ಅಂತ ಹುಡುಕುವುದರಲ್ಲಿ ಏನೂ ಲಾಭ ಇಲ್ಲ. ಅವರಿಗೆ 73, 74 ವಯಸ್ಸು ಅಂತ ಹುಡುಕಿದರೆ ಏನೂ ಲಾಭ ಇಲ್ಲ ಎಂದರು.

ಸಿದ್ದರಾಮಯ್ಯನವರಿಗೆ ವಯಸ್ಸು ಎಷ್ಟಾದರು ಇರಲಿ ತಕರಾರು ಯಾಕೆ

ಮಳೆ ಹಾನಿಗೆ ಸರ್ಕಾರ ಪರಿಹಾರ ಕೊಡಲು ಮುಂದಾಗುತ್ತಿಲ್ಲ : ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭೀಕರ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಕೃಷಿಕರು ಮತ್ತೊಮ್ಮೆ ಭಾರೀ ತೊಂದ್ರೆ ಅನುಭವಿಸುತ್ತಿದ್ದಾರೆ. ಆದ್ರೆ ರಾಜ್ಯ ಸರ್ಕಾರ ಮಾತ್ರ ಪರಿಹಾರ ಕೊಡೋದಕ್ಕೆ ಮುಂದಾಗ್ತಿಲ್ಲ ಅಂತ ರಾಜ್ಯ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ : ಪ್ರವಾಹ ಪರಿಹಾರದಲ್ಲಿ ವಿಜಯಪುರಕ್ಕೆ ಅನ್ಯಾಯ: ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಎಂ ಬಿ ಪಾಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.