ETV Bharat / state

ಪ್ರವಾಹ ಪರಿಹಾರ ಕ್ರಮಕ್ಕೆ ಸರ್ಕಾರ ಸಿದ್ಧ: ಸಿಎಂ ಬಿಎಸ್​​ವೈ - CM BS Yediyurappa

ರಾಜ್ಯದಲ್ಲಿನ ಸದ್ಯದ ಪ್ರವಾಹದ ಸ್ಥಿತಿಗೆ ಅನುಕೂಲವಾಗಲು ಸರ್ಕಾರವು ನೂರು ಕೋಟಿ ಬಿಡುಗಡೆಗೊಳಿಸಿದೆ ಸಂತ್ರಸ್ತರಿಗಾಗಿ ಯಾವುದೇ ರೀತಿಯ ಸಹಾಯಕ್ಕೂ ಸರ್ಕಾರ ಸಿದ್ಧವಿದೆ ಎಂದು ಬಿ.ಎಸ್​. ಯಡಿಯೂರಪ್ಪ ಗದಗದಲ್ಲಿ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
author img

By

Published : Aug 9, 2019, 6:54 PM IST

ಗದಗ: ರಾಜ್ಯದಲ್ಲಿನ ನೆರೆ ಪರಿಸ್ಥಿತಿ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗಿದೆ. ನಮ್ಮ ಸರ್ಕಾರವು ಪ್ರವಾಹದ ಬಗ್ಗೆ ಸೂಕ್ತ ಕ್ರಮಕ್ಕೆ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದರು.

ಗದಗ ಜಿಲ್ಲೆಯ‌ ನರಗುಂದ ತಾಲೂಕಿನ ಪ್ರವಾಹ ಪೀಡಿತ ಪ್ರದೇಶ ಕೊಣ್ಣೂರಿಗೆ ಸಿಎಂ ಬಿಎಸ್​​ವೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗದಗದ ರೋಣ, ನರಗುಂದದಲ್ಲಿ ಮಲಪ್ರಭ ಹಾಗೂ ಬೆಣ್ಣೆಹಳ್ಳದಲ್ಲಿನ ನೀರಿನ ಅಬ್ಬರದಿಂದ ನೆರೆ ಆವರಿಸಿದೆ. ಒಟ್ಟಾರೆ 27 ಗ್ರಾಮಗಳು ನೆರೆಗೆ ತುತ್ತಾಗಿವೆ. ಈ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗಿದ್ದು, ನಾಳೆ ಖುದ್ದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ರಾಜ್ಯಕ್ಕೆ ಆಗಮಿಸುತ್ತಿದ್ಧಾರೆ. ಅವರು ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕನ ನಡೆಸಲಿದ್ದಾರೆ ಎಂದು ತಿಳಿಸಿದರು.

ನರಗುಂದ ತಾಲೂಕಿನ ಪ್ರವಾಹ ಪೀಡಿತ ಪ್ರದೇಶ ಕೊಣ್ಣೂರಿಗೆ ಸಿಎಂ ಬಿಎಸ್​​ವೈ ಭೇಟಿ

ಸದ್ಯಕ್ಕೆ ನೂರು ಕೋಟಿ ಹಣ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಬಿಡುಗಡೆಗೊಳಿಸಲಾಗಿದ್ದು, ಸಂತ್ರಸ್ತರಿಗಾಗಿ ಯಾವುದೇ ರೀತಿಯ ಸಹಾಯಕ್ಕೂ ಸರ್ಕಾರ ಸಿದ್ಧವಿದೆ. ನೆರೆ ಪ್ರಮಾಣ ಕಡಿಮೆಯಾದ ಬಳಿಕ ಅಧಿಕಾರಿಗಳು ಸರ್ವೇ ನಡೆಸಿ ವರದಿ ನೀಡಿದ ಬಳಿಕ ಹೆಚ್ಚಿನ ಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಇದಕ್ಕೂ ಮುನ್ನ ಕೊಣ್ಣೂರು ಗ್ರಾಮಸ್ಥರು ಸಿಎಂ ಕಾರಿಗೆ ಘೇರಾವ್ ಹಾಕಿದ್ದರು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

Intro:Body:

Government ready for flood relief: CM BS Yediyurappa

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.