ಗದಗ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಾವಿನಲ್ಲೂ ನೇತ್ರದಾನ ಮಾಡಿ ಸಾರ್ಥಕತೆ ಮೆರೆದರು. ಸದ್ಯ ಅಪ್ಪು ಕಾರ್ಯದಿಂದ ಸ್ಫೂರ್ತಿಗೊಂಡಿರುವ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸುಮಾರು 40ಕ್ಕೂ ಹೆಚ್ಚು ಯುವರತ್ನನ ಅಭಿಮಾನಿಗಳು ನೇತ್ರದಾನ ಮಾಡಿ ಮಾದರಿಯಾಗಿದ್ದಾರೆ.
ನಟ ಸಾರ್ವಭೌಮ ಡಾ.ರಾಜ್‍ಕುಮಾರ್ ವಿಧಿವಶರಾದಾಗ ನೇತ್ರದಾನ ಮಾಡಿದಂತೆ, ನಟ ಪುನೀತ್ ರಾಜ್‍ಕುಮಾರ್ ಕೂಡ ನೇತ್ರದಾನ ಮಾಡಿ ನಾಲ್ಕು ಜನರ ಬಾಳಿಗೆ ಬೆಳಕಾದರು. ಇದರಿಂದ ಪ್ರೇರೇಪಿತರಾದ ಗಜೇಂದ್ರಗಡ ಬಂಜಾರ ಸಮುದಾಯದ 40ಕ್ಕೂ ಅಧಿಕ ಜನರು ಕಣ್ಣು ದಾನ ಮಾಡಲು ಮುಂದಾಗಿದ್ದಾರೆ.
ಗಜೇಂದ್ರಗಡದಲ್ಲಿ ನಡೆದ ಅಪ್ಪು 11ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಅಪಾರ ಅಭಿಮಾನಿಗಳು ನೇತ್ರದಾನ ಮಾಡಲು ನಿರ್ಧರಿಸಿದ್ದಲ್ಲದೆ, ಪುನೀತ್ ಭಾವಚಿತ್ರಕ್ಕೆ ವಿಶೇಷ ಪೂಜೆ, ಅನ್ನ ಸಂತರ್ಪಣೆ ಕೂಡ ಮಾಡಿದರು. ಅಪ್ಪು ಅಭಿಮಾನಿಗಳಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಗಜೇಂದ್ರಗಡ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ಅವರ ಅಭಿಮಾನಿಗಳು ಈ ಕಾರ್ಯ ಮಾಡಿದರು.