ಗದಗ : ಅಪ್ಪ ಇಲ್ಲದೆ ಅಮ್ಮನ ಆಸರೆಯಲ್ಲಿದ್ದರೂ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪದಕಗಳನ್ನ ಮುಡಿಗೇರಿಸಿಕೊಂಡಿರುವ ಜಿಲ್ಲೆಯ ಪ್ರತಿಭಾವಂತ ಯುವತಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರುವ ಭರವಸೆ ಹುಟ್ಟಿಸಿದಾರೆ.
ಹೆಸರು ಶ್ವೇತಾ ಬೆಳಗಟ್ಟಿ. ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರೋ ತರಬೇತಿ ಶಾಲೆಯಲ್ಲಿ ಕುಸ್ತಿ ಪಟ್ಟುಗಳನ್ನ ಕಲಿಯುತ್ತಿದಾರೆ. ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ರೂ ಕುಸ್ತಿಯಲ್ಲಿ ಹೆಚ್ಚಿನ ಸಾಧನೆ ಮಾಡುವ ಒಲವು ಹೊಂದಿದಾರೆ. ತರಬೇತುದಾರ ಶರಣಪ್ಪ ಬೇಲೇರಿ ಎಂಬುವರ ಗರಡಿಯಲ್ಲಿ ಸತತ 8 ವರ್ಷಗಳಿಂದ ಕುಸ್ತಿಯ ವಿವಿಧ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಿದಾರೆ.
ಸೆ.19ರಂದು ಉತ್ತರಪ್ರದೇಶದ ಅಮೇಥಿಯಲ್ಲಿ ನಡೆದ 23 ವರ್ಷದೊಳಗಿನ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಸತತ 2 ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದಾರೆ.
ತರಬೇತುದಾರ ಶರಣಗೌಡ ಬೇಲೇರಿಯವರು ಶ್ವೇತಾ ಬೆಳಗಟ್ಟಿ ಸೇರಿದಂತೆ 7 ರಿಂದ 8 ಕುಸ್ತಿ ಪಟುಗಳನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ವಿಶೇಷ ತರಬೇತಿ ನೀಡುತ್ತಿದಾರೆ. ಇದರಿಂದ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.
ವಿಶೇಷವಾಗಿ ಕೊರೊನಾ ಕಾಲದಲ್ಲಿ ತಮ್ಮ ಜಮೀನನಲ್ಲಿ ತರಬೇತಿ ನೀಡಿದಾರೆ. ಇದರ ಜೊತೆಗೆ ಸರ್ಕಾರ ಇಂತಹ ಬಡ ಕ್ರೀಡಾಪಟುಗಳ ಜೀವನ ಉತ್ತಮಗೊಳಿಸಲು ಎಲ್ಲಾ ಇಲಾಖೆಗಳಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಮನವಿ ಮಾಡಿದಾರೆ. ಒಂದು ಹಳ್ಳಿಯ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಆಡಿ ದೇಶದ ಕೀರ್ತಿ ಹೆಚ್ಚಿಸಲಿ ಎಂಬುದು ಕ್ರೀಡಾಭಿಮಾನಿಗಳ ಆಶಯ.
ಇದನ್ನೂ ಓದಿ: ಮೀಸಲಾತಿ ವಿರೋಧಿಸುತ್ತಿದ್ದವರೇ ಈಗ ಮೀಸಲಾತಿ ಪರವಾಗಿದ್ದಾರೆ : ಸಿದ್ದರಾಮಯ್ಯ