ETV Bharat / state

ಗದಗ: ಕಡಿಮೆ ಜಾಗದಲ್ಲಿ ವೀಳ್ಯದೆಲೆ ಬೆಳೆದು ಉತ್ತಮ ಆದಾಯ ಗಳಿಕೆ - good income by Betel crop

ಉತ್ತರ ಕರ್ನಾಟಕದಲ್ಲಿ ವೀಳ್ಯದೆಲೆ ಬೆಳೆಯೋದು ಅಪರೂಪ. ಆದ್ರೆ ಯಲಿಶಿರೂರು ಗ್ರಾಮದಲ್ಲಿ ಶೇ. 90ರಷ್ಟು ರೈತರು ವೀಳ್ಯದೆಲೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.

gadaga farmers getting good income by Betel cropgadaga farmers getting good income by Betel crop
gadaga farmers getting good income by Betel crop
author img

By

Published : Feb 10, 2022, 12:02 PM IST

Updated : Feb 10, 2022, 2:53 PM IST

ಗದಗ: ಗದಗ ತಾಲೂಕಿನ ಯಲಿಶಿರೂರು ಅನ್ನೋ ಗ್ರಾಮದಲ್ಲಿ ಶೇ. 90ರಷ್ಟು ರೈತರು ವೀಳ್ಯದೆಲೆ ಬೆಳೆದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ವಿಚಿತ್ರ ಅಂದ್ರೆ ಜಿಲ್ಲೆಯ ಯಾವ ಭಾಗದಲ್ಲಿಯೂ ಬೆಳೆಯಲಾರದ ವೀಳ್ಯದೆಲೆಯನ್ನು ಈ ಗ್ರಾಮದ ಹೆಚ್ಚಿನ ರೈತರು ಬೆಳೆಯುತ್ತಿದ್ದಾರೆ.

10 ಗುಂಟೆ, 7 ಗುಂಟೆ, 20 ಗುಂಟೆ ಹೀಗೆ ಕಡಿಮೆ ಜಮೀನಿನಲ್ಲಿ ತಿಂಗಳಿಗೆ 40 ರಿಂದ 50 ಸಾವಿರ ರೂ. ವರೆಗೆ ಆದಾಯ ಗಳಿಸುತ್ತಿದ್ದಾರೆ. ಒಂದು ವರ್ಷಕ್ಕೆ ಬರೋಬ್ಬರಿ 4 ರಿಂದ 5 ಲಕ್ಷ ರೂ. ವರೆಗೆ ಆದಾಯ ರೈತರ ಕೈಗೆ ಸಿಗುತ್ತಿದೆ. ಇಲ್ಲಿ ಅತಿ ಹೆಚ್ಚು ವೀಳ್ಯದೆಲೆ ಬೆಳೆಯೋದ್ರಿಂದ ಈ ಊರಿಗೆ ಶಿವಪೂರ ಬದಲಾಗಿ ಯಲಿಶಿರೂರು ಅಂತ ಮರುನಾಮಕರಣ ಮಾಡಿದ್ದಾರೆ.

ಈ ವೀಳ್ಯದೆಲೆ ಬೆಳೆಯನ್ನು ಒಂದು ಸಾರಿ ನಾಟಿ ಮಾಡಿದರೆ ಸಾಕು. ಆದ್ರೆ ವೀಳ್ಯದೆಲೆ ಬೆಳೆಯೋದಕ್ಕೆ ಬೆಂಬಲವಾಗಿ ಬೆಳೆಸಿರೋ ಗಿಡಗಳು ನಾಶ ಆದ್ರೆ ಮಾತ್ರ ವೀಳ್ಯದೆಲೆ ಇಳುವರಿ ಕುಂಠಿತಗೊಳ್ಳುತ್ತದೆ. ಒಂದು ವೇಳೆ ಗಿಡಗಳು ನಾಶವಾದ್ರೆ ಹೊಸದಾಗಿ ಮತ್ತೆ ಮರು ನಾಟಿ ಮಾಡಬೇಕಾಗುತ್ತದೆ. ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಔಷಧಿ ಸಿಂಪಡಣೆ ಮಾಡದೇ ಕೇವಲ ಸಾವಯುವ ಗೊಬ್ಬರವನ್ನು ಹಾಕಿ ಅತಿ ಕಡಿಮೆ ಖರ್ಚಿನಲ್ಲಿ ವೀಳ್ಯದೆಲೆ ಬೆಳೆಯುತ್ತಾರೆ ಇಲ್ಲಿನ ರೈತರು.

ಕಡಿಮೆ ಜಾಗದಲ್ಲಿ ವೀಳ್ಯದೆಲೆ ಬೆಳೆದು ಉತ್ತಮ ಆದಾಯ ಗಳಿಕೆ

ನಾಟಿ ಮಾಡಿದ ಎರಡನೇ ವರ್ಷಕ್ಕೆ ಇಳುವರಿ ಬರೋದಕ್ಕೆ ಆರಂಭವಾಗುತ್ತದೆ. ಪ್ರತಿ ಒಂದೂವರೆ ತಿಂಗಳಿಗೊಮ್ಮೆ ಎಲೆ ಕಟಾವು ಮಾಡಲಾಗುತ್ತದೆ. ಪ್ರತಿ ತಿಂಗಳು 30 ರಿಂದ 40 ಸಾವಿರ ರೂ. ಆದಾಯಕ್ಕೇನೂ ಕೊರತೆ ಇಲ್ಲ.

ಇದನ್ನೂ ಓದಿ: ಕೃಷಿಯೊಂದಿಗೆ ಮೀನು ಸಾಕಾಣಿಕೆಯಲ್ಲೂ ಯಶಸ್ಸು ಕಂಡ ಬೆಳ್ತಂಗಡಿಯ ಕೃಷಿಕ

ಉತ್ತರ ಕರ್ನಾಟಕದಲ್ಲಿ ವೀಳ್ಯದೆಲೆಗೆ ಭಾರಿ ಬೇಡಿಕೆ ಇದೆ. ಹುಟ್ಟಿನಿಂದ ಹಿಡಿದು ಸಾವಿನವರೆಗೂ ವೀಳ್ಯದೆಲೆ ಬೇಕು. ಬಹುತೇಕ ಎಲ್ಲಾ ಶುಭ ಕಾರ್ಯಗಳಿಗೆ ವೀಳ್ಯದೆಲೆ ಬೇಕೇ ಬೇಕು. ಗದಗನಲ್ಲಿ ಇದೊಂದೇ ಹಳ್ಳಿಯಲ್ಲಿ ಅತಿ ಹೆಚ್ಚು ವೀಳ್ಯದೆಲೆ ಬೆಳೆಯೋದ್ರಿಂದ ಎಲ್ಲಾ ತಾಲೂಕುಗಳಿಗೆ, ಪಕ್ಕದ ಜಿಲ್ಲೆಗಳಿಗೂ ಸಹ ಇಲ್ಲಿನ ವೀಳ್ಯದೆಲೆ ಮಾರಾಟವಾಗುತ್ತದೆ.

Last Updated : Feb 10, 2022, 2:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.