ಗದಗ: ಹೊಸದಾಗಿ 79 ಮಂದಿ ಸೇರಿದಂತೆ ಗದಗ ಜಿಲ್ಲೆಯಲ್ಲಿ ಈವರೆಗೆ ಒಟ್ಟು 939 ಜನರ ಮೇಲೆ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
28 ದಿನಗಳ ನಿಗಾ ಅವಧಿ ಪೂರೈಸಿದವರು 193 ಜನರಿದ್ದಾರೆ. ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರು 712 ಮಂದಿ ಇದ್ದಾರೆ. ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರು 33 ಜನರಿದ್ದಾರೆ ಎಂದು ತಿಳಿಸಿದ್ದಾರೆ.
ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿಗಳು 916. ಇದರಲ್ಲಿ 641 ಮಂದಿಯ ಮಾದರಿಗಳು ನೆಗೆಟಿವ್ ಬಂದಿವೆ. 43 ವರದಿ ತಿರಸ್ಕಾರವಾಗಿವೆ. 228 ಮಂದಿಯ ವರದಿ ಬಾಕಿ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಪಿ-166 , ಪಿ-304, ಪಿ-370, ಪಿ-396 ಒಟ್ಟು 4 ಕೊವಿಡ್-19 ಪ್ರಕರಣಗಳು ದೃಢ ಪಟ್ಟಿವೆ ಎಂದು ಪ್ರಕಟಿಸಿದ್ದಾರೆ.