ETV Bharat / state

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಡವಟ್ಟು: ಆತಂಕದಲ್ಲಿ ವಿದ್ಯಾರ್ಥಿನಿ

author img

By

Published : Aug 29, 2020, 3:09 PM IST

ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ವಿದ್ಯಾರ್ಥಿನಿಯ ಅಂಕ ಕಡಿತಗೊಂಡ ಘಟನೆ ಬೆಳಕಿಗೆ ಬಂದಿದೆ.

Sslc
Sslc

ಗದಗ: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯೊಬ್ಬಳ ಅಂಕಗಳು ಕಡಿತಗೊಂಡಿದೆ ಎನ್ನುವ ಆರೋಪ ಕೇಳಿಬಂದಿದೆ.

ಮಾರ್ಕ್ಸ್ ಕಾರ್ಡ್ ನಕಲಿ ಪ್ರತಿ
ಮಾರ್ಕ್ಸ್ ಕಾರ್ಡ್ ನಕಲಿ ಪ್ರತಿ

ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಕುಸುಮಾ ಕುಸುಗಲ್ ಎಂಬ ಬಾಲಕಿ ಹುಬ್ಬಳ್ಳಿಯ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಇವಳ ಉತ್ತರ ಪತ್ರಿಕೆ ಹಾಗೂ ಅಂಕ ಪಟ್ಟಿಯಲ್ಲಿರುವ ಅಂಕಿಗಳನ್ನು ತಾಳೆ ಹಾಕಿದಾಗ 26 ಅಂಕಗಳು ಖೋತಾ ಆಗಿದೆ. ಇದರಿಂದಾಗಿ ವಿದ್ಯಾರ್ಥಿನಿ ಆತಂಕಕ್ಕೆ ಸಿಲುಕಿದ್ದಾಳೆ.

ಇತ್ತೀಚಿಗೆ ಪ್ರಕಟಗೊಂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕುಸುಮಾ ಒಟ್ಟು 625 ಕ್ಕೆ 476 ಅಂಕ ಪಡೆದಿದ್ದಾಳೆ. ಕನ್ನಡ ಭಾಷೆಯಲ್ಲಿ 125ಕ್ಕೆ 116 ಅಂಕ, ಇನ್ನುಳಿದಂತೆ ಇಂಗ್ಲಿಷ್- 73, ಹಿಂದಿ- 96, ವಿಜ್ಞಾನ- 69, ಸಮಾಜ ವಿಜ್ಞಾನದಲ್ಲಿ 74 ಅಂಕ ಗಳಿಸಿದ್ದಾಳೆ. ಆದರೆ, ಗಣಿತ ವಿಷಯದಲ್ಲಿ 48 ಅಂಕ ಬಂದಿದ್ದರಿಂದ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಬೇಸರ ಮೂಡಿಸಿತ್ತು. ಹಾಗಾಗಿ ಉತ್ತರ ಪತ್ರಿಕೆಯ ಫೋಟೋ ಕಾಪಿ ತರಿಸಿದಾಗ 26 ಅಂಕಗಳು ಕಡಿಮೆ ಬಂದಿದ್ದು, ಅಧಿಕಾರಿಗಳ ಲೋಪ ಬೆಳಕಿಗೆ ಬಂದಿದೆ.

ಪರೀಕ್ಷೆಯಲ್ಲಿ ಕುಸುಮಾ 54 ಅಂಕ ಪಡೆದಿದ್ದಾಳೆ ಎಂದು ಉತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಿದೆ. ಆದರೆ, ಅಂಕಪಟ್ಟಿಯಲ್ಲಿ ಇಂಟರ್‌ನಲ್ 20, ಎಕ್ಸ್ಟರ್ನಲ್ 28 ಸೇರಿದಂತೆ ಒಟ್ಟು 48 ಅಂಕಗಳು ಎಂದು ತಪ್ಪಾಗಿ ನಮೂದಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ.

ಈ ಲೋಪವನ್ನು ಸರಿಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ ಗ್ರಾಮೀಣ ಮತ್ತು ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಿದರೂ ಕೂಡ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನಲಾಗಿದೆ. ಬದಲಾಗಿ ಪರೀಕ್ಷಾ ಮಂಡಳಿಗೆ ಅರ್ಜಿ ಬರೆಯಿರಿ, ರೀ ಕೌಂಟಿಂಗ್‍ಗೆ ಅರ್ಜಿ ಹಾಕಿ ಎಂದು ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.