ಗದಗ: ಮಹಾಮಳೆಗೆ ಉತ್ತರಕರ್ನಾಟಕದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ನದಿಯ ಪ್ರವಾಹದಿಂದ ಗ್ರಾಮಗಳು ಮುಳುಗಡೆಯಾಗಿವೆ. ಹೀಗಾಗಿ ಜಿಲ್ಲೆಯ ರೋಣ ಹಾಗೂ ನರಗುಂದ ತಾಲೂಕಿನ ಗ್ರಾಮಸ್ಥರು ಗದಗದ ತೋಂಟದಾರ್ಯ ಹಾಗೂ ವಿರೇಶ್ವರ ಪುಣ್ಯಾಶ್ರಮದ ಗವಾಯಿಗಳ ಮಠದಲ್ಲಿ ಆಶ್ರಯ ಪಡೆದಿದ್ದಾರೆ.
ನಿರಾಶ್ರಿತರಿಗೆ ಸಂಘ ಸಂಸ್ಥೆಗಳು ಹಾಗೂ ಗದಗ ಜನತೆ ಸಹಾಯ ಹಸ್ತ ಚಾಚುತ್ತಿದ್ದಾರೆ. ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ 400ಕ್ಕೂ ಅಧಿಕ ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಸಾಂಕ್ರಾಮಿಕ ರೋಗ ಬರದ ಹಾಗೇ ಅವರಿಗೆ ವೈದ್ಯಕೀಯ ಚಿಕಿತ್ಸೆ, ಊಟ ಉಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನು ನಿರಾಶ್ರಿತರಿಗೆ ಆಟೋ ಸಂಘದಿಂದ ಉಚಿತ ಆಟೋ ಸೌಲಭ್ಯ ಒದಗಿಲಾಗಿದೆ. ಇನ್ನು ಜಿಲ್ಲೆಯ ವಿವಿಧ ಭಾಗಗಳಿಂದ ಸಂತ್ರಸ್ತರಿಗೆ ರೊಟ್ಟಿ, ಚೆಟ್ನಿ, ಅಕ್ಕಿ, ತರಕಾರಿ, ಬಟ್ಟೆ ಸೇರಿದಂತೆ ಹಲವು ಸಾಮಗ್ರಿಗಳನ್ನ ನೀಡಲಾಗ್ತಿದೆ.